ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಇಂದು ಭೂಮಿ ಪೂಜೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಇಂದು ನಡೆಯಲಿದೆ. ಆದ್ರೆ ರಾಮನ ದರ್ಶನ ಶ್ರೀಸಾಮಾನ್ಯರಿಗೆ ಎಂದಿನಿಂದ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ನ ಟ್ರಸ್ಟಿ ಸ್ವಾಮಿ ಪರಮಾನಂದ್ ಮಹಾರಾಜ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಆದಷ್ಟು ಬೇಗ ದೇವಾಲಯ ನಿರ್ಮಾಣದ ಕಾಮಗಾರಿ ಪ್ರಾರಂಭವಾಗಲಿದೆ. ದೇವಾಲಯದ ನಿರ್ಮಾಣವನ್ನು ಪೂರ್ಣಗೊಳಿಸಲು ಟ್ರಸ್ಟ್ ಮುಂದಿನ 32 ತಿಂಗಳುಗಳನ್ನು ದೇವಾಲಯ ನಿರ್ಮಾಣ ಸಂಸ್ಥೆಗೆ ನೀಡಿದೆ. ಅಂದರೆ, ಇಂದಿನಿಂದ 2 ವರ್ಷ 8 ತಿಂಗಳಿಗೆ ಭವ್ಯ ರಾಮ ದೇವಾಲಯದ ನಿರ್ಮಾಣ ಪೂರ್ಣಗೊಳ್ಳಲಿದೆ.
ದೇಶದ ಯಾವ ಯಾವ ಪ್ರದೇಶದಲ್ಲಿ ಶಿಲಾ ಪೂಜೆ ನಡೆದಿದೆಯೋ ಅದನ್ನು ದೇವಾಲಯ ನಿರ್ಮಾಣಕ್ಕೆ ಬಳಸಿಕೊಳ್ಳಲಾಗುವುದು. ಕಾರ್ಸೆವಕ್ ಪುರಂನಲ್ಲಿ ಇರಿಸಲಾಗಿರುವ ಇಟ್ಟಿಗೆಗಳನ್ನು ರಾಮ್ ದೇವಾಲಯದ ನಿರ್ಮಾಣಕ್ಕೂ ಬಳಸಲಾಗುವುದು. ದೇವಾಲಯದ ನಿರ್ಮಾಣಕ್ಕಾಗಿ ದೇಣಿಗೆ ನೀಡುವ ಭಕ್ತರಿಗೆ ನೀಡುವ ದೇಣಿಗೆ ರಶೀದಿ ಕೂಡ ವಿಶೇಷವಾಗಿರುತ್ತದೆ. ಈ ರಶೀದಿ ಸಾಮಾನ್ಯ ರಶೀದಿಗಳಿಗಿಂತ ಭಿನ್ನವಾಗಿರುತ್ತದೆ. ಆ ರಶೀದಿಯನ್ನು ಜನರು ಶಾಶ್ವತವಾಗಿ ತಮ್ಮೊಂದಿಗೆ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ.