ನವದೆಹಲಿ: ಮಾಜಿ ಸೈನಿಕನೊಬ್ಬ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ. 2018 ರಲ್ಲಿ ಘಟನೆ ನಡೆದಿದ್ದು ಬುಧವಾರ ಆರೋಪಿಗಳನ್ನು ಬಂಧಿಸಲಾಗಿದೆ.
ಸರಬ್ಜಿತ್ ಹಾಗೂ ಆತನ ಸ್ನೇಹಿತ ಬಂಧಿತ ಆರೋಪಿಗಳಾಗಿದ್ದಾರೆ. ಮೊಹಾಲಿ ಜಿಲ್ಲೆಯ ಹಸನ್ ಪುರ ನಿವಾಸಿಯಾಗಿರುವ ಸರಬ್ಜಿತ್ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. 2018 ರಲ್ಲಿ ಚಂಡಿಗಢದ ಸೆಕ್ಟರ್ 15 ರಲ್ಲಿ ಸಿವಿಲ್ ಸರ್ವಿಸ್ ಕೋಚಿಂಗ್ ತೆಗೆದುಕೊಳ್ಳುತ್ತಿದ್ದ 27 ವರ್ಷದ ಯುವತಿ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಆಗ ಸಾಮಾಜಿಕ ಜಾಲತಾಣದ ಮೂಲಕ ಸರಬ್ಜಿತ್ ಯುವತಿಯೊಂದಿಗೆ ಗೆಳೆತನ ಬೆಳೆಸಿಕೊಂಡಿದ್ದಾನೆ. ಯುವತಿ ಆತನಿಂದ ಹಣ ಕೇಳಿದ್ದು ಹಣ ಕೊಡಲು ಒಪ್ಪಿದ್ದ ಆರೋಪಿ ಆಕೆಯನ್ನು ಬಸ್ ನಿಲ್ದಾಣ ಸಮೀಪವಿದ್ದ ಹೋಟೆಲ್ ಗೆ ಕರೆದುಕೊಂಡು ಹೋಗಿ ಹಣ ಕೊಟ್ಟಿದ್ದಾನೆ. ಮತ್ತು ಬರುವ ಪಾನೀಯ ಕುಡಿಸಿ ಅತ್ಯಾಚಾರ ಎಸಗಿದ್ದು ಆಕೆಯ ಆಕ್ಷೇಪಾರ್ಹ ಫೋಟೋಗಳನ್ನು ತೆಗೆದುಕೊಂಡಿದ್ದಾರೆ.
ನಂತರದಲ್ಲಿ ಯುವತಿಗೆ ಅಶ್ಲೀಲ ಫೋಟೋ ಕಳುಹಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪಿ ಯುವತಿಯ ಮದುವೆ ನಿಶ್ಚಯವಾಗಿದ್ದ ಹುಡುಗನಿಗೂ ಫೋಟೋಗಳನ್ನು ಕಳುಹಿಸಿದ್ದಾನೆ. 2018 ರಲ್ಲಿ ಮಾರ್ಚ್ ನಲ್ಲಿ ಮಣಿಮಾಜರಾದ ಹೋಟೆಲ್ ನಲ್ಲಿ ಸರಬ್ಜಿತ್ ಮತ್ತು ಆತನ ಗೆಳೆಯ ಅತ್ಯಾಚಾರ ಎಸಗಿದ್ದು, ನಂತರ 2018 ಜುಲೈನಲ್ಲಿ ಅಮೃತಸರದ ಹೋಟೆಲ್ ನಲ್ಲಿ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ.
2020 ರ ಜುಲೈನಲ್ಲಿ ಮದುವೆ ನಿಶ್ಚಯವಾಗಿದ್ದ ಹುಡುಗನಿಗೆ ಅಶ್ಲೀಲ ಫೋಟೋ ಕಳುಹಿಸಿದ್ದರಿಂದ ನಿಶ್ಚಿತಾರ್ಥ ರದ್ದುಪಡಿಸಲಾಗಿದೆ ಎಂದು ಮಹಿಳೆ ಹೇಳಿಕೊಂಡಿದ್ದಾಳೆ. ಆರೋಪಿ ಅಶ್ಲೀಲ ಫೋಟೋಗಳನ್ನು ಅಂತರ್ಜಾಲದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಹಾಕಿದ್ದರಿಂದ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.