ಪ್ರೀತಿಸಿ ಮದುವೆಯಾಗುತ್ತೇನೆ ಎಂದು ಹೇಳಿದ ಬಳಿಕ ಪ್ರಿಯತಮ ತನ್ನ ಪ್ರೇಯಸಿಯನ್ನ ಮದುವೆಯಾಗದೇ ಹೋದರಲ್ಲಿ ಅದನ್ನ ಅತ್ಯಾಚಾರ ಎಂದು ಪರಿಗಣನೆ ಮಾಡಲು ಆಗೋದಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸೂಕ್ತ ಕಾರಣಗಳಿಂದ ವ್ಯಕ್ತಿ ಪ್ರೇಮ ಸಂಬಂಧವನ್ನ ಕಡಿದುಕೊಳ್ಳಲು ಮುಂದಾಗಿದ್ರೆ ಆತನ ವಿರುದ್ಧ ಅತ್ಯಾಚಾರದ ಆರೋಪ ಹಾಕೋದು ಸರಿಯಲ್ಲ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಧನಂಜಯ ವೈ. ಚಂದ್ರಚೂಡ್ ಹಾಗೂ ಎಂ. ಆರ್ ಶಾ ನೇತೃತ್ವದ ನ್ಯಾಯಪೀಠ 30 ವರ್ಷದ ವ್ಯಕ್ತಿ ವಿರುದ್ಧ ಆತನ ಮಾಜಿ ಪ್ರೇಯಸಿ ದಾಖಲಿಸಿದ್ದ ಅತ್ಯಾಚಾರದ ಆರೋಪ ಸಂಬಂಧ ವಿಚಾರಣೆ ಕೈಗೆತ್ತಿಕೊಂಡಿತ್ತು.
ಮದುವೆಯಾಗುತ್ತೇನೆ ಎಂದು ನಿರ್ಧರಿಸಿದ ಇಬ್ಬರು ಪ್ರೇಮಿಗಳು ಲೈಂಗಿಕ ಸಂಪರ್ಕ ಹೊಂದಿದ ಬಳಿಕ ಮದುವೆಯಾಗಲು ಸಾಧ್ಯವಾಗದೇ ಹೋದಲ್ಲಿ ಅದನ್ನ ಅತ್ಯಾಚಾರ ಎಂದು ಹೇಳಲು ಸಾಧ್ಯವಿಲ್ಲ. 2019ರಲ್ಲಿ ನೀಡಲಾಗಿದ್ದ ತೀರ್ಪನ್ನ ಉಲ್ಲೇಖಿಸಿದ ನ್ಯಾಯಪೀಠ ಪ್ರತಿ ಭರವಸೆಯ ಉಲ್ಲಂಘನೆಯನ್ನ ಸುಳ್ಳು ಭರವಸೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದೆ.
ಮಾರ್ಚ್ 2018ರಂದು ಉತ್ತರ ಪ್ರದೇಶದ ಮಥುರಾದ ಮಹಿಳೆ ತನ್ನ ಮಾಜಿ ಪ್ರಿಯತಮನ ವಿರುದ್ಧ ದೂರು ದಾಖಲಿಸಿದ್ದಳು. ಒಂದೂವರೆ ವರ್ಷದ ಸಂಬಂಧದ ಬಳಿಕ ಪ್ರಿಯತಮ ಮದುವೆಗೆ ನಿರಾಕರಿಸಿದ್ದಾನೆ. ಅಲ್ಲದೇ ನಮ್ಮಿಬ್ಬರ ನಡುವೆ ಲೈಂಗಿಕ ಸಂಪರ್ಕ ಕೂಡ ಇತ್ತು. ಹೀಗಾಗಿ ನನಗೆ ಮದುವೆಯಾಗೋದಾಗಿ ನಂಬಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಮಹಿಳೆ ದೂರನ್ನ ನೀಡಿದ್ದಳು.
ಪ್ರೀತಿಸಿ ಮದುವೆಯಾಗದ ಎಲ್ಲಾ ಪ್ರಕರಣಗಳೂ ಅತ್ಯಾಚಾರದ ವ್ಯಾಪ್ತಿಗೆ ಬರೋದಿಲ್ಲ : ಸುಪ್ರೀಂ ಕೋರ್ಟ್
08-03-2021 1:06PM IST / No Comments / Posted In: Latest News, India