ಅಂತರ್ಜಾಲದಲ್ಲಿ ಆನೆಗಳ ಕುರಿತ ನೂರಾರು ವಿಡಿಯೋಗಳು ಕಾಣಸಿಗುತ್ತವೆ. ಆನೆಗಳ ಕುರಿತ ವಿಡಿಯೋಗಳು ನೆಟ್ಟಿಗರ ಮನಗೆಲ್ಲುತ್ತವೆ ಕೂಡ.
ಇತ್ತೀಚೆಗೆ ಮತ್ತೊಂದು ವಿಡಿಯೋ ಗಮನ ಸೆಳೆಯುತ್ತಿದೆ. ತರಬೇತಿ ಪಡೆದ ಆನೆಯ ವಿವಿಧ ಚಟುವಟಿಕೆ ನಡೆಸುವ ವಿಡಿಯೋ ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ರಾಜೀವ್ ಅಗರ್ವಾಲ್ ಎಂಬುವರು ‘ಹಾಥಿ ಮೇರೆ ಸಾಥಿ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ.
ಸ್ಕೂಟಿಯಲ್ಲಿ ಕುಳಿತ ವ್ಯಕ್ತಿಯನ್ನು ಆನೆ ಕಾಲು ಹಿಡಿದು ಎಳೆದು ಆತ ಹೊರಡುವುದನ್ನು ತಡೆಯುತ್ತದೆ. ಆತ ಸ್ಕೂಟಿಯಲ್ಲಿ ಕುಳಿತುಕೊಳ್ಳಲು ಹಿಂತಿರುಗಿದಾಗ, ಆನೆ ಹೆಲ್ಮೆಟ್ ತಂದು ಆತನ ತಲೆಯ ಮೇಲೆ ಇಡುತ್ತದೆ. ಮುಂದಿನ ದೃಶ್ಯದಲ್ಲಿ, ಆನೆಯು ವ್ಯಕ್ತಿಯನ್ನು ಸೊಂಡಿಲಲ್ಲಿ ಎತ್ತಿಕೊಂಡು ಬ್ಯಾಸ್ಕೆಟ್ ಬಾಲ್ ಅನ್ನು ಬ್ಯಾಸ್ಕೆಟ್ ಗೆ ಹಾಕಿಸುತ್ತದೆ.
ಮುಂದೆ, ಆನೆ ಸೊಂಡಿಲು ಮತ್ತು ಕಾಲು ಬಳಸಿ ಮಸಾಜ್ ಮಾಡಲು ಪ್ರಯತ್ನಿಸುವುದನ್ನು ಸಹ ವಿಡಿಯೋ ಕ್ಲಿಪ್ ನಲ್ಲಿ ನೋಡಬಹುದು. ಮೊದಲು ಎಣ್ಣೆಯನ್ನು ಆತನ ಬೆನ್ನಿಗೆ ಹಾಕಿ ನಂತರ ಅದರ ಪಾದವನ್ನು ಬಳಸಿ ಮಸಾಜ್ ಮಾಡುತ್ತದೆ.
https://twitter.com/rajeev_1304/status/1286854094305390592?ref_src=twsrc%5Etfw%7Ctwcamp%5Etweetembed%7Ctwterm%5E1286854094305390592%7Ctwgr%5E&ref_url=https%3A%2F%2Fwww.indiatoday.in%2Ftrending-news%2Fstory%2Fever-seen-an-elephant-giving-a-massage-video-of-gentle-giant-and-its-human-friend-will-make-you-smile-1704226-2020-07-25