ಕೊರೊನಾ ಹಾಗೂ ಲಾಕ್ಡೌನ್ನಿಂದಾಗಿ ದೇಶದಲ್ಲಿ ಅನೇಕರ ಹೊಟ್ಟೆ ಮೇಲೆ ಬರೆ ಎಳೆದಿದೆ. ದಿನಗೂಲಿಯನ್ನ ನಂಬಿಕೊಂಡಿದ್ದ ಕಾರ್ಮಿಕರಂತೂ ಹೊತ್ತಿನ ಊಟಕ್ಕೂ ಪರಿತಪಿಸುವಂತಾಗಿದೆ.
ಆದರೆ ಕೂಲಿ ಕಾರ್ಮಿಕರಂತೆ ವೇಶ್ಯಾವಾಟಿಕೆ ನಡೆಸುವವರೂ ಕೂಡ ಕೊರೊನಾ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದಾರಂತೆ.
ಕೊರೊನಾ ಬಳಿಕ ಗ್ರಾಹಕರೇ ಇಲ್ಲದೇ ಲೈಂಗಿಕ ಕಾರ್ಯಕರ್ತೆಯರು ಸಾಲದ ಬಲೆಯಲ್ಲಿ ಬಿದ್ದಿದ್ದಾರೆ.
ಏಷ್ಯಾದ ಅತಿದೊಡ್ಡ ರೆಡ್ ಲೈಟ್ ಪ್ರದೇಶವಾಗಿರುವ ಸೋನಾಗಾಚಿಯಲ್ಲಿ ಇತ್ತೀಚೆಗೆ ನಡೆಸಲಾದ ಸಮೀಕ್ಷೆಯಲ್ಲಿ , ಶೇ.89ರಷ್ಟು ಲೈಂಗಿಕ ಕಾರ್ಯಕರ್ತೆಯರು ಸಾಲದ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ ಎಂಬ ಅಂಶ ಬಯಲಾಗಿದೆ.
ಆರ್ಥಿಕ ಸಂಕಷ್ಟದಿಂದ ಪಾರಾಗೋಕೆ ಶೇ.73ರಷ್ಟು ಲೈಂಗಿಕ ಕಾರ್ಯಕರ್ತೆಯರು ತಮ್ಮ ಈ ಕಸಬನ್ನ ಬಿಟ್ಟು ಬೇರೆ ಆದಾಯದ ಮೂಲ ಹುಡುಕೋಣ ಅಂದರೂ ಸಹ ಮಾಲೀಕರಿಂದ ಪಡೆದ ಸಾಲದಿಂದಾಗಿ ಅದು ಸಾಧ್ಯವಾಗ್ತಾ ಇಲ್ಲ ಅಂತಾ ಸಮೀಕ್ಷೆಯ ವರದಿ ತಿಳಿಸಿದೆ.