alex Certify ಈ ದೇಗುಲದಲ್ಲಿ ಪ್ರಸಾದದ ಬದಲು ಭಕ್ತರಿಗೆ ನೀಡಲಾಗುತ್ತೆ ​ಮಾಸ್ಕ್​..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ದೇಗುಲದಲ್ಲಿ ಪ್ರಸಾದದ ಬದಲು ಭಕ್ತರಿಗೆ ನೀಡಲಾಗುತ್ತೆ ​ಮಾಸ್ಕ್​..!

ಡೆಡ್ಲಿ ಕೊರೊನಾ ವೈರಸ್​ ಯಾರನ್ನೂ ಬಿಟ್ಟಿಲ್ಲ. ಕೊರೊನಾ ಕೇಸ್​ಗಳ ಪ್ರಮಾಣ ಗಣನೀಯವಾಗಿ ಏರಿಕೆ ಕಾಣ್ತಿರೋದ್ರ ಜೊತೆಗೆ ಮಿಲಿಯನ್​ಗಟ್ಟಲೇ ಜನರು ಈ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ .

ಉತ್ತರ ಪ್ರದೇಶದ ಇಟಾದಲ್ಲಿನ ದೇವಸ್ಥಾನದಲ್ಲಿರುವ ದುರ್ಗಾ ಮಾತೆಯ ಪ್ರತಿಮೆಗೆ ಮಾಸ್ಕ್​ನ್ನ ಹಾಕಲಾಗಿದೆ. ಮಾಸ್ಕ್​ ಹಾಕಿಕೊಂಡ ದುರ್ಗಾ ಮಾತೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ದೇಶದಲ್ಲಿ ಕೊರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾಗುತ್ತಿರೋದ್ರ ಹಿನ್ನೆಲೆ ದೇವಸ್ಥಾನದ ಪುರೋಹಿತರಾದ ಪಂಡಿತ್​ ಮನೋಜ್​ ಶರ್ಮಾ ಈ ಪ್ಲಾನ್​ ಮಾಡುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.

ದೇವಸ್ಥಾನದಲ್ಲಿ ನಾವು ಸ್ಯಾನಿಟೈಸರ್​ ಸೇರಿದಂತೆ ಕೊರೊನಾದ ಎಲ್ಲಾ ಮಾರ್ಗಸೂಚಿಗಳನ್ನ ಪಾಲಿಸುವ ವ್ಯವಸ್ಥೆ ಮಾಡಿದ್ದೇವೆ, ದೇವಸ್ಥಾನದ ವಿವಿಧ ಕಡೆಗಳಲ್ಲಿ ಕೊರೊನಾ ಮಾರ್ಗಸೂಚಿ ಬೋರ್ಡ್​ಗಳನ್ನ ಅಳವಡಿಸಿದ್ದೇವೆ ಎಂದು ಪಂಡಿತ್​ ಮನೋಜ್​ ಶರ್ಮಾ ಹೇಳಿದ್ದಾರೆ.

ಈ ದೇವಸ್ಥಾನದಲ್ಲಿ ಭಕ್ತರು ಸಾಮಾಜಿಕ ಅಂತರವನ್ನ ಕಾಪಾಡೋದು ಕಡ್ಡಾಯವಾಗಿದೆ. ಇನ್ನೊಂದು ವಿಶೇಷ ಅಂದರೆ ಈ ದೇವಸ್ಥಾನದಲ್ಲಿ ಭಕ್ತರಿಗೆ ಪ್ರಸಾದದ ರೂಪದಲ್ಲಿ ಮಾಸ್ಕ್​ಗಳನ್ನ ನೀಡಲಾಗ್ತಿದೆ.

ಈ ದೇವಸ್ಥಾನದ ಪೂಜಾ ಕಾರ್ಯಕ್ಕೆ ಒಂದು ಬಾರಿಗೆ ಐದು ಭಕ್ತರ ಎಂಟ್ರಿಗೆ ಅವಕಾಶವಿದೆ. ಈ ಭಕ್ತರು ಮಾಸ್ಕ್​, ಸಾಮಾಜಿಕ ಅಂತರ ಸೇರಿದಂತೆ ಎಲ್ಲಾ ಮಾರ್ಗಸೂಚಿಗಳನ್ನ ಪಾಲನೆ ಮಾಡೋದು ಕಡ್ಡಾಯ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...