ದೆಹಲಿ ಹಾಗೂ ಲಂಡನ್ ನಡುವೆ ಸಾಕಷ್ಟು ಕನೆಕ್ಟಿಂಗ್ ಫ್ಲೈಟ್ ಗಳಿವೆ ಎಂದಬುದು ಗೊತ್ತಿರುವ ವಿಚಾರ. ಆದರೆ, ಈ ನಗರಗಳ ನಡುವೆ ಬಸ್ ಸಂಪರ್ಕವಿದ್ದರೆ ಹೇಗೆ ಎಂದು ಎಂದಾದರೂ ಊಹಿಸಿದ್ದೀರಾ…?
‘Adventures Overland’ ಹೆಸರಿನ ಟ್ರಾವೆಲ್ ಕಂಪನಿಯೊಂದು ಈ ಎರಡೂ ನಗರಗಳ ನಡುವೆ ಬಸ್ ಸಂಚಾರ ಘೋಷಣೆ ಮಾಡಿದಾಗಿನಿಂದ ಬಹಳ ಸುದ್ದಿಯಲ್ಲಿದೆ. ಮೇ 2021ರಿಂದ ಈ ಸೇವೆ ಲಭ್ಯವಿರಲಿದ್ದು, 18 ದೇಶಗಳನ್ನು ಬಳಸಿಕೊಂಡು, 70 ದಿನಗಳ ಅವಧಿಯಲ್ಲಿ 20 ಸಾವಿರ ಕಿಲೋ ಮೀಟರ್ ದೂರವನ್ನು ಕ್ರಮಿಸುತ್ತವೆ.
ಈ ಮಾರ್ಗದಲ್ಲಿ ಮ್ಯಾನ್ಮಾರ್, ಲಾವೋಸ್, ಥಾಯ್ಲೆಂಡ್, ಚೀನಾ, ಕಿರ್ಗಿಸ್ತಾನ್, ಕಝಕಸ್ತಾನ್, ಉಜ್ಬೆಕಿಸ್ತಾನ್, ರಷ್ಯಾ, ಲ್ಯಾಟ್ವಿಯಾ, ಪೋಲೆಂಡ್, ಝೆಕ್ ಗಣರಾಜ್ಯ, ಜರ್ಮನಿ, ಬೆಲ್ಜಿಯಂ ಹಾಗೂ ಬ್ರಿಟನ್ ಗಳು ಸಹ ಬರುತ್ತವೆ. ಟ್ರಾವೆಲ್ ಕಂಪನಿಯು ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ಜರ್ನಿಯ ಬಗ್ಗೆ ಪೋಸ್ಟ್ ಮಾಡಿಕೊಂಡಿದೆ.
https://www.instagram.com/p/CD5YzcGpGHX/?utm_source=ig_embed