ಕೋವಿಡ್-19 ಸಾಂಕ್ರಮಿಕದ ಕಾರಣದಿಂದಾಗಿ ವೃದ್ಧ ಜನರಿಗೆ ಪಿಂಚಣಿ ಹಣ ಪಡೆಯಲು ಸಲ್ಲಿಸಬೇಕಾದ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ಇದ್ದ ಡೆಡ್‌ಲೈನ್ ಅನ್ನು ಫೆಬ್ರವರಿ 28, 2021ರವರೆಗೂ ವಿಸ್ತರಿಸಲಾಗಿದೆ.
ಕಾರ್ಮಿಕರ ಪಿಂಚಣಿ ಯೋಜನೆ 1995ರ ಅಡಿಯಲ್ಲಿ ಪಿಂಚಣಿ ಪಡೆಯುತ್ತಿರುವ ಹಿರಿಯ ಪ್ರಜೆಗಳೆಲ್ಲಾ ಯಾವುದೇ ತಿಂಗಳ ಪಿಂಚಣಿಗೂ ಸಲ್ಲಿಸಬೇಕಾದ ಈ ಪ್ರಮಾಣ ಪತ್ರವನ್ನು ಸಲ್ಲಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಿ ಕಾರ್ಮಿಕರ ಪಿಂಚಣಿ ನಿಧಿ ಸಂಸ್ಥೆ ಆದೇಶ ಹೊರಡಿಸಿದೆ.
ಸದ್ಯದ ಮಟ್ಟಿಗೆ ಪಿಂಚಣಿ ಸ್ಕೀಂನಲ್ಲಿರುವ ಯಾವುದೇ ಪಿಂಚಣಿದಾರ ನವೆಂಬರ್ 30ರ ವರೆಗೂ ಯಾವುದೇ ಕೆಲಸದ ದಿನದಂದು ಜೀವನ ಪ್ರಮಾಣ ಪತ್ರ ಸಲ್ಲಿಸಬಹುದಾಗಿದೆ. ಇದೀಗ ಈ ದಿನಾಂಕವನ್ನು ವಿಸ್ತರಿಸಲಾಗಿದೆ.
ದೇಶಾದ್ಯಂತ ಇರುವ 3.65 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು, 1.36 ಲಕ್ಷ ಅಂಚೆ ಕಚೇರಿಗಳು, 1.9 ಲಕ್ಷ ಪೋಸ್ಟ್‌ಮೆನ್ ಹಾಗೂ ಗ್ರಾಮೀಣ್ ಡಾಕ್ ಸೇವಕರ ಮುಖಾಂತರ ಪಿಂಚಣಿದಾರರು ಮೇಲ್ಕಂಡ ಪ್ರಮಾಣ ಪತ್ರವನ್ನು ಸಲ್ಲಿಸಬಹುದಾಗಿದೆ. ಹತ್ತಿರದ ಸೇವಾ ಕೇಂದ್ರವನ್ನು ಲೊಕೇಟ್ ಮಾಡಲು https://locator.csccloud.in/ ಅಡ್ರೆಸ್‌ಗೆ ಭೇಟಿ ಕೊಡಬಹುದಾಗಿದೆ.