ಲಾಹೌಲ್ ಕಣಿವೆಯಲ್ಲಿ ಕೊರೊನಾ ಸೋಂಕು ಉಲ್ಬಣಗೊಂಡ ಬಳಿಕ ಟೆಲಿಂಗ್ ನುಲ್ಲಾಗೆ ಪ್ರವಾಸಿಗರ ಸಂಚಾರ ನಿರ್ಬಂಧಿಸಲಾಗಿದೆ.
ಮನಾಲಿ – ಲೇಹ್ ಹೆದ್ದಾರಿಯಲ್ಲಿನ ಥೋರಂಗ್ ಗ್ರಾಮದಲ್ಲಿ ಕೇವಲ 42 ಮಂದಿ ನಿವಾಸಿಗಳಿದ್ದು, ಇದರಲ್ಲಿ 41 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.
ಲಾಹೌಲ್ನ ಸ್ಪಿಟಿ ಜಿಲ್ಲೆಯಲ್ಲಿ ಸುಮಾರು 856 ಮಂದಿ ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ. ಮೂಲಗಳ ಪ್ರಕಾರ ಕೆಲ ದಿನಗಳ ಹಿಂದಷ್ಟೇ ಧಾರ್ಮಿಕ ಕಾರ್ಯಕ್ರಮವೊಂದಕ್ಕಾಗಿ ಗ್ರಾಮಸ್ಥರೆಲ್ಲ ಒಂದೇ ಕಡೆ ಜಮಾಯಿಸಿದ್ದರು.
ಈ ವೇಳೆ ಸಾಮಾಜಿಕ ಅಂತರ ಕಾಪಾಡಲು ಗ್ರಾಮಸ್ಥರು ನಿರ್ಲಕ್ಷ್ಯ ತೋರಿದ ಕಾರಣ ಈ ರೀತಿ ಊರಿಗೆ ಊರೇ ಸೋಂಕಿಗೆ ಒಳಪಟ್ಟಿದೆ ಎನ್ನಲಾಗ್ತಿದೆ.