ಗುಜರಾತ್ ನಲ್ಲಿ ಉಪ ಚುನಾವಣೆಯ ರಂಗು ಜೋರಾಗಿದೆ. ಉಪ ಚುನಾವಣೆ ಹೊಸ್ತಿಲಲ್ಲೇ ಇದೀಗ ಆರೋಪ – ಪ್ರತ್ಯಾರೋಪಗಳು ಕೇಳಿ ಬರುತ್ತಿವೆ. ಗುಜರಾತ್ ಉಪ ಚುನಾವಣೆ ಇದೀಗ ಮತ್ತೊಂದು ದೊಡ್ಡ ಚರ್ಚೆಗೆ ಕಾರಣವಾಗಿದೆ. ಅದೇ ಕಾಂಗ್ರೆಸ್ ಪಕ್ಷ ಹರಾಜಿನ ಕಥೆ.
ಹೌದು, ಗುಜರಾತ್ನಲ್ಲಿ ಕಾಂಗ್ರೆಸ್ ಘಟಕವೇ 25 ಕೋಟಿ ರೂಪಾಯಿಗಳಿಗೆ ಹರಾಜಿಗಿದೆ ಎಂದು ಹೇಳುವ ಮೂಲಕ ಹೊಸ ಚರ್ಚೆ ಹುಟ್ಟು ಹಾಕಿದ್ದಾರೆ ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ. ರಾಹುಲ್ ಗಾಂಧಿಯವರ ಆರೋಪಕ್ಕೆ ರೂಪಾನಿ ತಿರುಗೇಟು ನೀಡುವ ಮೂಲಕ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇತ್ತೀಚೆಗೆ ರಾಹುಲ್ ಗಾಂಧಿ, ಕಾಂಗ್ರೆಸ್ ಶಾಸಕರಾಗಿದ್ದ ಅಕ್ಷಯ್ ಪಟೇಲ್ರನ್ನು ಬಿಜೆಪಿ 25 ಕೋಟಿ ರೂಪಾಯಿ ಕೊಟ್ಟು ಕೊಂಡುಕೊಂಡಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಟಾಂಗ್ ಕೊಟ್ಟಿರುವ ವಿಜಯ್ ರೂಪಾನಿ, ತಮ್ಮ ಪಕ್ಷದ ಶಾಸಕರ ಮೇಲೆ ರಾಹುಲ್ ಗಾಂಧಿಯವರಿಗೆ ನಂಬಿಕೆ ಇಲ್ಲ. ಗಾಂಧೀಜಿ ಕಂಡ ಕಾಂಗ್ರೆಸ್ ಪಕ್ಷ, ಅವರ ಸಿದ್ದಾಂತಗಳು ಈಗ ಪಕ್ಷದಲ್ಲಿ ಇಲ್ಲ ಎಂದಿದ್ದಾರೆ.