ನವದೆಹಲಿ: ಅದಕ್ಷ ಮತ್ತು ಭ್ರಷ್ಟ ನೌಕರರನ್ನು ಗುರುತಿಸಿ ಅಂತವರಿಗೆ ಅವಧಿ ಪೂರ್ವದಲ್ಲೇ ನಿವೃತ್ತಿ ನೀಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಇಂತಹ ಕ್ರಮ ಕೈಗೊಳ್ಳಬೇಕೆಂದು ಎಲ್ಲಾ ಇಲಾಖೆಗಳಿಗೆ ಸಿಬ್ಬಂದಿ ಸಚಿವಾಲಯದ ವತಿಯಿಂದ ಆದೇಶ ಹೊರಡಿಸಲಾಗಿದೆ.
30 ವರ್ಷಗಳ ಕಾಲ ಸೇವೆ ಸಲ್ಲಿಸಿದ ನೌಕರರ ಸೇವಾ ಪುಸ್ತಕ ಪರಾಮರ್ಷೆ ಕೈಗೊಳ್ಳಬೇಕು. ಭ್ರಷ್ಟ ಮತ್ತು ಅದಕ್ಷ ನೌಕರರಿಗೆ ಅವಧಿಪೂರ್ವ ನಿವೃತ್ತಿ ನೀಡಬೇಕು ಎಂದು ತಿಳಿಸಲಾಗಿದೆ. ಅವಧಿಗೆ ಮೊದಲೇ ನಿವೃತ್ತಿ ನೀಡುವುದನ್ನು ದಂಡ ವಿಧಿಸುವುದು ಎಂಬಂತೆ ಅರ್ಥೈಸಬಾರದು. ಇದು ಕಡ್ಡಾಯ ನಿವೃತ್ತಿ ಇಲ್ಲ ಎಂದು ಹೇಳಲಾಗಿದೆ.
ಕೇಂದ್ರ ನಾಗರಿಕ ಸೇವಾ ನಿಯಮಗಳಡಿ ಭ್ರಷ್ಟರೆಂದು ಗುರುತಿಸಲಾದ ನೌಕರರಿಗೆ ಅವಧಿಗೆ ಮೊದಲೇ ನಿವೃತ್ತಿ ನೀಡಲು ಸಂಬಂಧಿಸಿದ ಇಲಾಖೆಗಳಿಗೆ ಅಧಿಕಾರವಿದ್ದು, ಈ ನಿಟ್ಟಿನಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಅದಕ್ಷ, ಭ್ರಷ್ಟ ನೌಕರರನ್ನು ಗುರುತಿಸಿ ನಿವೃತ್ತಿ ನೀಡಲು ತಿಳಿಸಲಾಗಿದೆ ಎಂದು ಹೇಳಲಾಗಿದೆ.