ಪ್ರತಿಭಟನೆಯ ರೂಪವಾಗಿ ಮುಂಬೈನ ಭಿಂಡಿ ಬಜಾರ್ನ ರಸ್ತೆಗಳಲ್ಲಿ ಅಂಟಿಸಲಾಗಿರುವ ಫ್ರಾನ್ಸ್ ಅಧ್ಯಕ್ಷ ಇಮ್ಮಾನ್ಯುವಲ್ ಮ್ಯಾಕ್ರೋನ್ ಪೋಸ್ಟರ್ಗಳನ್ನ ತೆರವು ಮಾಡುವಂತೆ ಮುಂಬೈ ಪೊಲೀಸರು ಆದೇಶ ನೀಡಿದ್ದಾರೆ.
ಪಂಥೀಯ ವಿಚಾರವಾಗಿ ಮುಸ್ಲಿಂ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನುವಲ್ ವಿರುದ್ಧ ಮುಂಬೈನಲ್ಲೂ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಜೆಜೆ ಫ್ಲೈ ಓವರ್ ಅಡಿಯ ಮೊಹಮ್ಮದ್ ಅಲಿ ರಸ್ತೆಯಲ್ಲೂ ಆಕ್ರೋಶ ವ್ಯಕ್ತವಾಗಿತ್ತು.
ಮುಂಬೈ ಪೊಲೀಸ್ ವಕ್ತಾರ ಎಸ್. ಚೈತನ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಪೈಡೋನಿ ಠಾಣೆ ಪೊಲೀಸರು ಪೋಸ್ಟರ್ಗಳನ್ನ ತೆರವು ಮಾಡಿದ್ದಾರೆ ಅಂತಾ ಹೇಳಿದ್ರು. ಫ್ರಾನ್ಸ್ ಅಧ್ಯಕ್ಷರ ಫೋಟೋ ರಸ್ತೆಗಳಲ್ಲಿ ಅಂಟಿಸುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದ ವಿಡಿಯೋಗಳು ಟ್ವಿಟರ್ನಲ್ಲಿ ಹರಿದಾಡುತ್ತಿವೆ.