alex Certify ಬೇಸಿಗೆ ಧಗೆ ತಣಿಸಿಕೊಳ್ಳಲು ಆನೆಗಳಿಗೆಂದೇ ನಿರ್ಮಾಣವಾಗಿದೆ ಸ್ವಿಮ್ಮಿಂಗ್‌ ಪೂಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೇಸಿಗೆ ಧಗೆ ತಣಿಸಿಕೊಳ್ಳಲು ಆನೆಗಳಿಗೆಂದೇ ನಿರ್ಮಾಣವಾಗಿದೆ ಸ್ವಿಮ್ಮಿಂಗ್‌ ಪೂಲ್

ಪುಣೆಯ ಮೃಗಾಲಯವೊಂದರಲ್ಲಿ ಬೇಸಿಗೆಯ ಧಗೆಯನ್ನ ತಣಿಸುವುದಕ್ಕೋಸ್ಕರ ಇಲ್ಲಿರುವ 2 ಆನೆಗಳಿಗಾಗಿ ಸ್ವಿಮ್ಮಿಂಗ್​ ಪೂಲ್​ ನಿರ್ಮಿಸಲಾಗಿದೆ. ಕತ್ರಾಜ್​​ನಲ್ಲಿರುವ ರಾಜೀವ್​ ಗಾಂಧಿ ಮೃಗಾಲಯದಲ್ಲಿ ಈ ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ಎರಡು ಹೆಣ್ಣು ಆನೆಗಳಿದ್ದು ಸ್ವಿಮ್ಮಿಂಗ್​ ಪೂಲ್​ನಲ್ಲಿ ಸಖತ್​ ಎಂಜಾಯ್​ ಮಾಡ್ತಿವೆ.

25 ವರ್ಷ ವಯಸ್ಸಿನ ಈ ಆನೆಗಳ ಮಾವುತರಾಗಿರುವ ತಜ್ಜುದ್ದೀನ್​ ಕಳೆದ 18 ವರ್ಷಗಳಿಂದ ಈ ಆನೆಗಳನ್ನ ಹೇಗೆ ಕಾಳಜಿಯಿಂದ ನೋಡಿಕೊಳ್ತಿದ್ದೇನೆ ಅನ್ನೋದ್ರ ಬಗ್ಗೆ ಮಾಹಿತಿ ನೀಡಿದ್ರು.

55 ವರ್ಷದ ತಜ್ಜುದ್ದೀನ್​ ಪೂರ್ವಜರು ಕಳೆದ 350 ವರ್ಷಗಳಿಂದ ಪುಣೆಯಲ್ಲಿಯೇ ನೆಲೆಸಿದ್ದು ತಲತಲಾಂತರಗಳಿಂದ ಆನೆಯ ಕಾಳಜಿಯನ್ನ ಈ ಕುಟುಂಬವೇ ಮಾಡುತ್ತಿದೆ.

ಆನೆಗಳು ಕೂಡ ತಜುದ್ದೀನ್​ ಜೊತೆ ವಿಶೇಷ ಬಂಧ ಬೆಳೆಸಿಕೊಂಡಿವೆ. ಮೃಗಾಲಯದಲ್ಲಿ ಬೆಳಗ್ಗೆ 9 ಗಂಟೆಗೆ ತಜುದ್ದೀನ್​ ಹಾಜರಾಗ್ತಾರೆ. ತಜ್ಜುದೀನ್​ರನ್ನ ದೂರದಿಂದ ನೋಡುತ್ತಲೇ ಮೀರಾ ಹಾಗೂ ರೇಣುಕಾ ಇವರನ್ನ ಗುರುತು ಹಿಡಿಯುತ್ತವೆಯಂತೆ.

ಇನ್ನು ಪೂಲ್​ ವಿಚಾರವಾಗಿ ಮಾತನಾಡಿದ ಮೃಗಾಲಯದ ಪಶು ವೈದ್ಯೆ ಡಾ. ಸುಚಿತ್ರಾ ಸೂರ್ಯವಂಶಿ, ಕಳೆದ ವರ್ಷ ಲಾಕ್​​ಡೌನ್​ ಸಮಯದಲ್ಲಿ ಮುಂಬೈನ ಇಬ್ಬರು ಇಂಜಿನಿಯರ್​ಗಳು ಈ ಪೂಲ್​ನ್ನು ನಿರ್ಮಿಸಿದ್ದರು. ಆನೆಯ ತೂಕವನ್ನ ತಡೆದುಕೊಳ್ಳಲು ಸಾಧ್ಯವಾಗುವ ರೀತಿಯಲ್ಲೇ ಪೂಲ್​ನ್ನು ನಿರ್ಮಿಸಲಾಗಿದೆ ಎಂದು ಹೇಳಿದ್ರು.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...