
ಭಾರತೀಯ ಅರಣ್ಯ ಇಲಾಖೆ ಅಧಿಕಾರಿ ಪರ್ವೀನ್ ಕಸ್ವಾನ್ ಎಂಬವರು ವಿಡಿಯೋವೊಂದನ್ನ ಶೇರ್ ಮಾಡಿದ್ದು ಇದರಲ್ಲಿ ಆನೆ ಟ್ರಕ್ ಒಳಗೆ ಸೊಂಡಿಲು ಹಾಕಿ ಡಜಲ್ ಗಟ್ಟಲೆ ಬಾಳೆಹಣ್ಣನ್ನ ಹೊತ್ತೊಯ್ದಿದೆ. ಈ ವಿಡಿಯೋ ಪೋಸ್ಟ್ ಆದ ಕೆಲವೇ ಗಂಟೆಗಳಲ್ಲಿ ಲಕ್ಷಕ್ಕೂ ಹೆಚ್ಚು ವೀವ್ಸ್ ಪಡೆದುಕೊಂಡಿದೆ.
ರಸ್ತೆಯಲ್ಲಿ ಆನೆಯನ್ನ ನೋಡಿದ ಟ್ರಕ್ ಡ್ರೈವರ್ ಗಾಡಿಯನ್ನ ನಿಲ್ಲಿಸಿದ್ದಾರೆ. ಅದಕ್ಕೆ ಕೆಲ ಬಾಳೆ ಹಣ್ಣನ್ನ ಕೊಡಬೇಕು ಅನ್ನೋವಷ್ಟರಲ್ಲಿ ಕಿಟಕಿಯೊಳಗೆ ಸೊಂಡಿಲು ಹಾಕಿದ ಆನೆ ಬಲವಂತದಿಂದ ಬಾಳೆ ಹಣ್ಣುಗಳನ್ನ ಎಳೆದೊಯ್ದಿದೆ.
ಈ ವಿಡಿಯೋ ಪೋಸ್ಟ್ ಮಾಡಿದ ಕಸ್ವಾನ್ ಹೈವೇಯಲ್ಲಿ ಹಗಲು ದರೋಡೆ ಅಂತಾ ಕ್ಯಾಪ್ಶನ್ ನೀಡಿದ್ದಾರೆ. ಅಲ್ಲದೇ ಕಾಡು ಪ್ರಾಣಿಗಳಿಗೆ ರಸ್ತೆಯಲ್ಲಿ ಹೋಗುವವರು ತಿಂಡಿ – ತಿನಿಸುಗಳನ್ನ ನೀಡಿದ್ರೆ ಹೀಗೆ ಆಗುತ್ತೆ. ಆ ಪ್ರಾಣಿಗಳು ಅದನ್ನೇ ಅಭ್ಯಾಸ ಮಾಡಿಕೊಂಡು ಮನುಷ್ಯನ ಜೀವಕ್ಕೆ ತೊಂದರೆ ಕೊಡುವ ಸಾಧ್ಯತೆ ಇರುತ್ತೆ ಅಂತಾ ಬರೆದುಕೊಂಡಿದ್ದಾರೆ.