ಇತ್ತೀಚೆಗೆ ರಸ್ತೆಯ ತಡೆಗೋಡೆ ಹತ್ತಲು ಹರಸಾಹಸಪಡುತ್ತಿದ್ದ ಮರಿಗೆ ತಾಯಿ ಆನೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿತ್ತು.
ಇದೀಗ ಅಸ್ಸಾಂನಲ್ಲಿ ಉಕ್ಕೇರಿದ ನದಿಯ ಪ್ರವಾಹ ದಾಟಿಸಿದ ಮರಿಯಾನೆ – ತಾಯಾನೆಯ ಪ್ರೀತಿಪೂರಕ ವಿಡಿಯೋ ವೈರಲ್ ಆಗಿದೆ.
ಸರ್ಗಿಂತ್ ಬಿಕಾಶ್ ಎಂಬುವರು ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ಭಾರತ – ಭೂತಾನ್ ಗಡಿಯಲ್ಲಿರುವ ಅಸ್ಸಾಮಿನ ಉದಾಲ್ ಘುರ್ ಪ್ರಾಂತ್ಯದಲ್ಲಿ ಸೆರೆ ಹಿಡಿದ ವಿಡಿಯೋ ಇದಾಗಿದೆ.
ಅತಿವೃಷ್ಟಿಯಿಂದಾಗಿ ಅಸ್ಸಾಂ ರಾಜ್ಯ ತತ್ತರಿಸುತ್ತಿದ್ದು, ಎಲ್ಲೆಡೆ ನದಿಗಳು ಉಕ್ಕಿ ಹರಿಯುತ್ತಿವೆ. ಕಾಡುಪ್ರಾಣಿಗಳಿಂದ ಹಿಡಿದು ನಾಡಿನಲ್ಲಿರುವ ಮನುಷ್ಯರವರೆಗೂ ಸಂಕಟಪಡುವಂತಾಗಿದೆ.
ಪ್ರವಾಹೋಪಾದಿಯಲ್ಲಿ ಹರಿಯುತ್ತಿದ್ದ ನದಿ ನೀರಿನಲ್ಲಿ ಮರಿಯಾನೆಯೊಂದಿಗೆ ಈಜಿ ಬಂದ ಎರಡು ಆನೆಗಳು ದಡ ಸೇರಿದವು. ಆದರೆ, ಹರಿಯುವ ನೀರಿನಲ್ಲೇ ಉಳಿದುಬಿಟ್ಟ ಮರಿಯನ್ನು ಮೇಲೆತ್ತಲು ಪ್ರಯಾಸಪಟ್ಟಿತು. ಇದು ತಾಯಿ ಪ್ರೀತಿ ಏನೆಂಬುದನ್ನು ಬಿಂಬಿಸುವಂತಿದೆ.
https://twitter.com/bikash63/status/1287312219785400320?ref_src=twsrc%5Etfw%7Ctwcamp%5Etweetembed%7Ctwterm%5E1287312219785400320%7Ctwgr%5E&ref_url=https%3A%2F%2Fwww.news18.com%2Fnews%2Fbuzz%2Felephant-mother-helps-baby-jumbo-cross-river-in-flood-hit-assam-video-goes-viral-2741351.html