ಒಂದೆಡೆ ಘೇಂಡಾಮೃಗ ಹಾಗೂ ಇನ್ನೊಂದೆಡೆ ಆನೆ. ಈ ಎರಡನ್ನೂ ಒಂದೇ ಫ್ರೇಮ್‌ನಲ್ಲಿ ನೋಡುವುದೇ ಚೆಂದ. ಇನ್ನು ಈ ಎರಡು ಪ್ರಾಣಿಗಳು ಒಂದನ್ನು ಒಂದು ತಬ್ಬಿಕೊಂಡಿರುವ ವಿಡಿಯೋ ನೋಡಿದರೆ ಹೇಗಾಗಬೇಡ?
ಹೌದು, ಅಚ್ಚರಿಯಾದರೂ ಇದು ನಿಜ. ಐಎಫ್‌ಎಸ್ ಅಧಿಕಾರಿ ಸುಶಾಂತ ನಂದಾ ಅವರು ಶೇರ್ ಮಾಡಿರುವ ಅಪರೂಪದ ವಿಡಿಯೋದಲ್ಲಿ ಈ ಎರಡು ಬೃಹತ್ ಜೀವಿಗಳ ಸಮಾಗಮವಾಗಿದೆ. ಬುಧವಾರ ಈ ವಿಡಿಯೊವನ್ನು ಪೋಸ್ಟ್ ಮಾಡಿರುವ ನಂದಾ ಅವರು, ಈ ವಿಡಿಯೋವನ್ನು ಯಾರು ಮಾಡಿದ್ದಾರೆ ಎಲ್ಲಿ ಮಾಡಿದ್ದಾರೆ ಎನ್ನುವುದು ಹೇಳಿಲ್ಲ. ಆದರೆ ಈ ವಿಡಿಯೋ ಮಾತ್ರ ನೆಟ್ಟಿಗರ ಹೃದಯವನ್ನು ಗೆದ್ದಿದೆ.
ಸಿಂಪಲ್ ಅಪ್ಪುಗೆಯಲ್ಲಿ ಅದ್ಭುತ ಕ್ಷಣವಿದೆ ಎಂದು, ಈ 16 ಸೆಕೆಂಡ್‌ನ ವಿಡಿಯೋ ಹಾಕಿದ್ದಾರೆ. ನೀರಿನ ಬಳಿ ನಿಂತಿರುವ ಘೇಂಡಾಮೃಗವೊಂದ ಬಳಿ ನಿಂತ ಆನೆ. ಕೆಲ ಕ್ಷಣದ ಬಳಿಕ ಸೊಂಡಲಿನಿಂದ ಘೇಂಡಾಮೃಗವನ್ನು ತಬ್ಬಿಕೊಂಡಿದೆ. ಇದೀಗ ಈ ವಿಡಿಯೋ ವೈರಲ್ ಆಗಿದ್ದು, ಸಾವಿರಾರು ಮಂದಿ ವೀಕ್ಷಿಸಿದ್ದಾರೆ. 195 ರೀಟ್ವೀಟ್ ಹಾಗೂ ಸಾವಿರಕ್ಕೂ ಹೆಚ್ಚು ಲೈಕ್ಸ್‌ಗಳು ಬಂದಿವೆ.