ಜಾರ್ಖಂಡ್‌ನ ಬಾವಿಯೊಂದಕ್ಕೆ ಅಕಸ್ಮಾತ್ ಆಗಿ ಜಾರಿ ಬಿದ್ದ ಕಾಡಾನೆ ಮರಿಯೊಂದನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯಾಚರಣೆಯ ಚಿತ್ರಗಳು ವೈರಲ್ ಆಗಿವೆ.
ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಅವರು ರಕ್ಷಣಾ ಕಾರ್ಯಾಚರಣೆಯ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದು, ತೆರೆದ ಬಾವಿಯಿಂದ ಆನೆ ಮರಿಯನ್ನು ಹೇಗೆ ರಕ್ಷಣೆ ಮಾಡಲಾಗಿದೆ ಎಂದು ಈ ಚಿತ್ರಗಳು ತೋರುತ್ತಿವೆ.
ಘಟನೆ ಕುರಿತಂತೆ ಸ್ಥಳೀಯರು ಮಾಹಿತಿ ಕೊಡುತ್ತಲೇ ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಜೆಸಿಬಿ ಯಂತ್ರವೊಂದನ್ನು ಬಳಸಿಕೊಂಡು ಆನೆಮರಿಯನ್ನು ರಕ್ಷಿಸಿದ್ದಾರೆ. ಬಾವಿಯಲ್ಲಿ ಅಡಗಿ ಕುಳಿತಿದ್ದ ಆನೆ ಮರಿಯನ್ನು ಹೊರಗೆ ತೆಗೆಯಲು ಅರಣ್ಯ ಇಲಾಖೆ ಸಿಬ್ಬಂದಿಗೆ ಜೆಸಿಬಿ ಯಂತ್ರ ಬಳಸಿ ಸ್ಥಳವನ್ನು ಅಗೆಯುತ್ತಿರುವುದನ್ನು ಚಿತ್ರಗಳಲ್ಲಿ ನೋಡಬಹುದಾಗಿದೆ.