ನವದೆಹಲಿ: ಸಾರ್ವತ್ರಿಕ ಮತ್ತು ಉಪಚುನಾವಣೆಗಳಿಗೆ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ಕೇಂದ್ರ ಚುನಾವಣಾ ಆಯೋಗದಿಂದ ಮಾರ್ಗಸೂಚಿ ರಿಲೀಸ್ ಮಾಡಲಾಗಿದ್ದು ಚುನಾವಣಾ ಸಂಬಂಧಿತ ಕೆಲಸಗಳಲ್ಲಿ ಮಾಸ್ಕ್ ಬಳಕೆ ಕಡ್ಡಾಯವಾಗಿದೆ.
ಚುನಾವಣೆ ಕೆಲಸದ ವೇಳೆ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯವಾಗಿದ್ದು, ಆನ್ಲೈನ್ ನಲ್ಲಿ ನಾಮಪತ್ರ ಡೌನ್ಲೋಡ್ ಮಾಡಿಕೊಳ್ಳಬೇಕು. ಅಫಿಡವಿಟ್ ಗಳನ್ನು ಆನ್ಲೈನ್ ನಲ್ಲಿ ಅಭ್ಯರ್ಥಿಗಳು ಸಲ್ಲಿಸಬೇಕು. ಠೇವಣಿಯ ಹಣವನ್ನು ಆನ್ಲೈನ್ ನಲ್ಲಿಯೂ ಪಾವತಿಸಬಹುದು.
ನಾಮಪತ್ರ ಸಲ್ಲಿಸುವ ವೇಳೆ ಇಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಎರಡು ವಾಹನಗಳಲ್ಲಿ ಮಾತ್ರ ನಾಮಪತ್ರ ಸಲ್ಲಿಸಲು ಬರಬೇಕು. ರಿಟರ್ನಿಂಗ್ ಅಧಿಕಾರಿಯ ಕಚೇರಿ ವಿಶಾಲವಾಗಿರಬೇಕು. 1000 ಮತದಾರರಿಗೆ ಒಂದು ಮತಗಟ್ಟೆ ಸ್ಥಾಪಿಸಬೇಕು ಎಂದು ಹೇಳಲಾಗಿದೆ. ಹಿಂದೆ 1500 ಮತದಾರರಿಗೆ ಒಂದು ಮತಗಟ್ಟೆ ಇರುತ್ತಿತ್ತು. ಈಗ 1 ಸಾವಿರ ಮತದಾರರಿಗೆ ಮತಗಟ್ಟೆ ನಿಗದಿ ಮಾಡಲಾಗಿದೆ.