ದೆಹಲಿಯ ನೆಹರೂ ವಿಹಾರದಲ್ಲಿ ಮೊಬೈಲ್ನಲ್ಲಿ ನೆಟ್ ಬ್ಯಾಂಕಿಂಗ್ ಬಳಕೆ ಮಾಡಲು ನೆರೆಮನೆಯ ಯುವತಿಯ ಸಹಾಯ ಕೋರಿದ್ದ ವೃದ್ಧೆ ಮೋಸ ಹೋಗಿದ್ದಾರೆ. ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ವೃದ್ಧೆಗೆ ಮೋಸ ಮಾಡಲು ಹೋಗಿ ಜೈಲುಪಾಲಾಗಿದ್ದಾಳೆ.
ಅನಧಿಕೃತ ವಹಿವಾಟಿನ ಬಗ್ಗೆ ಮಾಹಿತಿ ತಿಳಿದ ವೃದ್ಧೆಯ ಪುತ್ರ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನಲ್ಲಿ ಕಾಲೇಜು ಯುವತಿ 2019ರ ನವೆಂಬರ್ನಿಂದ 2020ರ ಮಾರ್ಚ್ ನಡುವೆ ಬರೋಬ್ಬರಿ 2,38,000 ರೂಪಾಯಿ ವಂಚನೆ ಎಸಗಿರುವ ವಿಚಾರ ಬಟಾಬಯಲಾಗಿದೆ. ಪ್ರಕರಣ ಸಂಬಂಧ ಆರೋಪಿ ಯುವತಿಯನ್ನ ಪೊಲೀಸರು ಬಂಧಿಸಿದ್ದಾರೆ.
ಮೋಸಕ್ಕೊಳಗಾದ ವೃದ್ಧೆ ತನ್ನ ನೆರಮನೆಯ ಯುವತಿ ಬಳಿ ಮೊಬೈಲ್ ವಾಲೆಟ್ ನಿರ್ವಹಣೆಗೆಂದು ಸಹಾಯ ಕೋರಿದ್ದರು. ನವೆಂಬರ್ ತಿಂಗಳಲ್ಲಿ ವೃದ್ಧೆ ಹೊಸ ಡೆಬಿಟ್ ಕಾರ್ಡ್ನ್ನ ಪಡೆದಿದ್ದರು, ಆಗ ಯುವತಿಯೇ ವೃದ್ಧೆಗೆ ಎಟಿಎಂ ಕಾರ್ಡ್ಗೆ ಹೊಸ ಪಿನ್ ಸಂಖ್ಯೆ ರಚಿಸಿಕೊಟ್ಟಿದ್ದಳು.
ವೃದ್ಧೆಯ ಮೊಬೈಲ್ ವ್ಯಾಲೆಟ್ ಹಾಗೂ ಎಟಿಎಂ ಪಿನ್ ಬಗ್ಗೆ ಮಾಹಿತಿ ಪಡೆದಿದ್ದ ಯುವತಿ ಈ ಹಣವನ್ನ ಬಳಸಿ ಬಟ್ಟೆ, ಗೃಹೋಪಯೋಗಿ ವಸ್ತುಗಳು. ಮೊಬೈಲ್ ರೀ ಚಾರ್ಜ್ ಸೇರಿದಂತೆ ಹಲವಾರು ವಿಚಾರಕ್ಕೆ ಹಣವನ್ನ ವ್ಯಯಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.