ಮದುವೆ ವಾರ್ಷಿಕೋತ್ಸವಗಳು ಯಾವಾಗಲೂ ವಿಶೇಷವಾದ ಸಂದರ್ಭಗಳು. ದಾಂಪತ್ಯ ಜೀವನದ ಬೆಸುಗೆ ಅದೆಷ್ಟು ಪ್ರಖರವಾಗಿದೆ ಎಂದು ಸಾರುವ ಈ ಸಂಭ್ರಮಾಚರಣೆಗಳನ್ನು ಜನರು ಬಹಳ ಸಂತಸದಿಂದ ಆಚರಿಸುತ್ತಾರೆ.
ಹಿರಿಯ ದಂಪತಿಗಳು ತಮ್ಮ ವಿವಾಹ ವಾರ್ಷಿಕೋತ್ಸವವನ್ನು ಬಹಳ ಕ್ರಿಯೇಟಿವ್ ಆಗಿ ಆಚರಿಸಿಕೊಂಡಿದ್ದು, ಅವರ ವಿಡಿಯೋ ವೈರಲ್ ಆಗಿದೆ.
ತಮ್ಮ ಹುಟ್ಟಿದ ವರ್ಷಗಳಿಂದ ಹಿಡಿದು, ಮದುವೆಯಾದ ವರ್ಷ, ಮಕ್ಕಳು ಹುಟ್ಟಿದ ವರ್ಷ, ಮನೆ ಕಟ್ಟಿದ ವರ್ಷ ಹಾಗೂ ಕಾರು ತೆಗೆದುಕೊಂಡ ವರ್ಷಗಳನ್ನು ಸೂಚಿಸುವ ವಿಶೇಷವಾದ ಪುಷ್ಪಾಲಂಕಾರಗಳ ಮೂಲಕ ಈ ದಂಪತಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.