ಮದುವೆಗಿಂತ ಮದುವೆ ಫೋಟೋಗ್ರಾಫಿ ಇತ್ತೀಚಿನ ದಿನಗಳಲ್ಲಿ ಬಹಳ ಸದ್ದು ಮಾಡುವ ವಿಚಾರವಾಗಿಬಿಟ್ಟಿದೆ. ಕೆಲವೊಮ್ಮೆ ಹೆತ್ತವರು ಹಾಗು ಅಜ್ಜ-ಅಜ್ಜಿಯರ ಮದುವೆಯ ವೆಡ್ಡಿಂಗ್ ಫೋಟೋಗಳನ್ನು ನೋಡಿದಾಗ ಅವರ ಕಾಲಕ್ಕೆ ಹೋದಂತೆ ಭಾಸವಾಗುತ್ತದೆ.
ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದ ವೆಡ್ಡಿಂಗ್ ಫೋಟೋಶೂಟ್ ಒಂದು ನೆಟ್ಟಿಗರ ಹೃದಯ ಗೆಲ್ಲುತ್ತಿದೆ. 85 ವರ್ಷದ ಕುಂಜೂಟ್ಟಿ ಹಾಗೂ 80 ವರ್ಷದ ಚಿನ್ನಮ್ಮ ದಂಪತಿಯ ಬಳಿ ತಮ್ಮ ಮದುವೆಯ ಯಾವುದೇ ಫೋಟೋ ಇರಲಿಲ್ಲ. ಹೀಗಾಗಿ ಅವರ ಮೊಮ್ಮಗ ಈ ಹಿರಿಯ ದಂಪತಿಗಳ ವೆಡ್ಡಿಂಗ್ ಫೋಟೋಶೂಟ್ ಇಟ್ಟುಕೊಳ್ಳಲು ನಿರ್ಧರಿಸಿದ್ದಾರೆ.
ಮದುಮಕ್ಕಳಂತೆ ಮಿಂಚುತ್ತಿರುವ ಈ ಹಿರಿಯ ದಂಪತಿ ಚಿತ್ರಗಳು ಇನ್ಸ್ಟಾಗ್ರಾಂನಲ್ಲಿ ಸೆನ್ಸೇಷನ್ ಆಗಿವೆ.
https://www.instagram.com/p/CFlUCVvpuJr/?utm_source=ig_web_copy_link