“ವಯಸ್ಸು ಎಂಬುದು ಕೇವಲ ಸಂಖ್ಯೆ ಮಾತ್ರ ಮನಸ್ಸು ಯೌವ್ವನದಲ್ಲಿದ್ದರೆ ಪ್ರತಿ ಕ್ಷಣವನ್ನೂ ಆನಂದಿಸಬಹುದು” ಎಂಬುದಕ್ಕೆ ಈ ಜೋಡಿ ಸಾಕ್ಷಿ. ಗುರುಗ್ರಾಮದ 76 ವರ್ಷದ ರಾಮ್ ಗಿರಿಧರ್ ಹಾಗೂ 72 ವರ್ಷದ ಪ್ರೇರಣಾ ಪ್ರಸಿದ್ಧ ಬಾಲಿವುಡ್ ಹಾಡಿಗೆ ಮಾಡಿದ ನೃತ್ಯ ಜಾಲತಾಣಗಳಲ್ಲಿ ಹರಿದಾಡಿದೆ.
ಮೊದಲು ಯೂ ಟ್ಯೂಬ್ ನಲ್ಲಿ ಶೇರ್ ಆಗಿದ್ದ ಅಜ್ಜ, ಅಜ್ಜಿ ಡಾನ್ಸ್ ಅನ್ನು ಈಗ “ದ ಬೆಟರ್ ಇಂಡಿಯನ್” ಎಂಬ ಟ್ವಿಟರ್ ಖಾತೆಯಲ್ಲಿ ಅಪ್ಲೋಡ್ ಮಾಡಲಾಗಿದೆ. 2013 ರಲ್ಲಿ ಬಂದ ಯೇ ಜವಾನಿ ಯೇ ದಿವಾನಿ ಹಾಡಿಗೆ ಜೋಡಿ ನೃತ್ಯ ಮಾಡಿದ್ದು, ನಿಟ್ಟಿಗರ ಮನ ಗೆದ್ದಿದೆ.
ಹಾಡಿನಲ್ಲಿ ನಟಿಸಿರುವ ರಣಬೀರ್ ಕಪೂರ್ ಹಾಗೂ ಮಾಧುರಿ ದೀಕ್ಷಿತ್ ಅವರ ಎಲ್ಲ ಭಾವ ಭಂಗಿಗಳನ್ನು ಯಥಾವತ್ ಮಾಡಿದ್ದು, ಗಾಘ್ರಾ ಹಾಕಿ ಬಟ್ಟೆಯ ಬಣ್ಣವೂ ಮೂಲ ಹಾಡಿನ ಸನ್ನಿವೇಶಕ್ಕೆ ಹೋಲುವಂತೆ ಬಳಸಿದ್ದಾರೆ.