ಕೊರೋನಾ ಚಿಕಿತ್ಸೆಗಾಗಿ ಪತಂಜಲಿ ಸಂಸ್ಥೆ ಆವಿಷ್ಕರಿಸಿರುವ ಔಷಧಿ ಮಾರುಕಟ್ಟೆಗೆ ಬಂದುಬಿಟ್ಟರೆ ಎನ್ನುವ ಆತಂಕ ಉಳಿದೆಲ್ಲ ಸಂಸ್ಥೆಗಳಲ್ಲಿ ಮನೆ ಮಾಡಿದೆ ಎನ್ನಲಾಗ್ತಿದೆ.
ಹರಿದ್ವಾರದಲ್ಲಿನ ಯೋಗಗುರು ಬಾಬಾ ರಾಮದೇವ್ ಅವರ ಪತಂಜಲಿ ಸಂಶೋಧನಾ ಕೇಂದ್ರ ಹಾಗೂ ಜೈಪುರದ ರಾಷ್ಟ್ರೀಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಸಹಯೋಗದಲ್ಲಿ ಮಾತ್ರೆಗಳ ಪ್ರಯೋಗ ನಡೆದಿದೆ.
ಸುಮಾರು 100ಕ್ಕೂ ಹೆಚ್ಚು ಮೂಲಿಕೆಗಳನ್ನ ಬಳಸಿ ಮಾತ್ರೆ ಸಿದ್ಧಗೊಂಡಿದ್ದು, ಬೆಳಗ್ಗೆ ಹಾಗೂ ರಾತ್ರಿ ಎರಡೆರಡು ಮಾತ್ರೆಗಳನ್ನು ಬಿಸಿನೀರಿನಲ್ಲಿ ತೆಗೆದುಕೊಳ್ಳಬೇಕು. 280 ಜನರ ಮೇಲೆ ಪ್ರಯೋಗಿಸಿದ್ದು, 7 ದಿನದಲ್ಲಿ ಶೇ.100 ರಷ್ಟು ಗುಣಮುಖರಾಗಿದ್ದಾರೆಂದು ಬಾಬಾ ರಾಮದೇವ್ ಹೇಳಿಕೊಂಡಿದ್ದಾರೆ.
ಆದರೆ, ಇದಕ್ಕಿನ್ನೂ ಐಸಿಎಂಆರ್ ಅನುಮೋದನೆ ನೀಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ನಗೆಪಾಟಲಿಗೀಡಾಗಿದೆ. ಒಬ್ಬೊಬ್ಬರ ಟ್ರೋಲ್ ಕಮೆಂಟ್ ಗಳನ್ನು ನೋಡಿದರೆ ನಗು ತರಿಸುತ್ತದೆ.
https://twitter.com/AsishKumarBar17/status/1275349497539751937?ref_src=twsrc%5Etfw%7Ctwcamp%5Etweetembed%7Ctwterm%5E1275349497539751937%7Ctwgr%5E&ref_url=https%3A%2F%2Fwww.timesnownews.com%2Fthe-buzz%2Farticle%2Fek-zamana-tha-jab-corona-hua-karta-tha-netizens-react-after-patanjali-ayurved-launches-coronil%2F610743