ಉತ್ತರ ಪ್ರದೇಶದ ಭಾಗ್ಪತ್ ಜಿಲ್ಲೆಯ ಬರೌತ್ ಪಟ್ಟಣದ ಚಾಟ್ ಸ್ಟಾಲ್‌ಗಳ ಮಾಲೀಕರು ಹಾಗೂ ಕೆಲಸಗಾರರ ನಡುವೆ ನಡೆದ ಹೊಡೆದಾಟವೊಂದರ ವಿಡಿಯೋ ವೈರಲ್ ಆಗಿದೆ.
ಕಬ್ಬಿಣದ ರಾಡ್‌ಗಳು ಹಾಗೂ ಕೋಲುಗಳನ್ನು ಹಿಡಿದ ಮಂದಿ ತಮ್ಮ ತಮ್ಮಲ್ಲೇ 20 ನಿಮಿಷಗಳ ಕಾಲ ಕಾದಾಡಿಕೊಂಡಿದ್ದಾರೆ. ಘಟನೆಯಲ್ಲಿ 12 ಮಂದಿ ಗಾಯಗೊಂಡಿದ್ದು, ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಂಟು ಮಂದಿ ಬಂಧಿತರ ಫೋಟೋ ಒಂದು ವೈರಲ್ ಆದ ಬಳಿಕ ಅವರ ಪೈಕಿ ಉದ್ದ ಜುಟ್ಟಿನ ವ್ಯಕ್ತಿಯೊಬ್ಬ ನೆಟ್ಟಿಗರಿಗೆ ಹಾಗೂ ಮೀಮ್ ತಯಾರಕರಿಗೆ ಬಲೇ ಮೋಜಿನ ವಸ್ತುವಾಗಿದ್ದಾರೆ. ಶ್ರೇಷ್ಠ ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೀನ್ ಹಾಗೂ ತ್ರೀ ಇಡಿಯಟ್ಸ್ ಚಿತ್ರದ ’ವೈರಸ್’ ಬೋಮನ್ ಇರಾನಿರನ್ನು ನೆನಪಿಸುವಂತೆ ಕಾಣುತ್ತಿರುವ ಈ ವ್ಯಕ್ತಿ ಸಖತ್ ಟ್ರೋಲ್ ಆಗುತ್ತಿದ್ದಾರೆ.
ಉತ್ತರ ಪ್ರದೇಶಕ್ಕೆ ಬಂದ ಆಲ್ಬರ್ಟ್ ಐನ್‌ಸ್ಟೀನ್ ಕುಸ್ತಿಯ ಹೊಸ ಪಟ್ಟುಗಳನ್ನು ಕಲಿಯುತ್ತಿದ್ದಾರೆ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
https://twitter.com/RaiSandeepTOI/status/1363787418206232579?ref_src=twsrc%5Etfw%7Ctwcamp%5Etweetembed%7Ctwterm%5E1363787418206232579%7Ctwgr%5E%7Ctwcon%5Es1_&ref_url=https%3A%2F%2Fwww.news18.com%2Fnews%2Fbuzz%2Feinstein-or-virus-photo-of-man-arrested-from-up-fight-between-shopkeepers-goes-viral-3463691.html