ಕೋವಿಡ್-19 ಲಾಕ್‌ಡೌನ್‌ನಿಂದ ಹೊರಬಂದು ಎಂದಿನಂತೆ ಚಟುವಟಿಕೆಗಳನ್ನು ನಡೆಸುವುದು ಯಾವಾಗ ಎಂದು ಇಡೀ ಜಗತ್ತೇ ಚಿಂತನೆಯಲ್ಲಿ ತೊಡಗಿದೆ. ಶೈಕ್ಷಣಿಕ ರಂಗಕ್ಕೂ ಸಹ ಇದೇ ಚಿಂತೆ ಕಾಡುತ್ತಿದೆ.
ಶಾಲಾ-ಕಾಲೇಜುಗಳು ಯಾವಾಗ ಮರು ಆರಂಭಗೊಳ್ಳಲಿವೆ ಎಂಬ ಕುರಿತಂತೆ ಅಂತಿಮ ತೀರ್ಮಾನ ಇನ್ನೂ ಹೊರಬರಬೇಕಿದೆ. ಇದೇ ವೇಳೆ ಮುಂಬಯಿಯ ‘Sion Friends Circle’ ತಮ್ಮ ಏರಿಯಾದಲ್ಲಿ ಮೊಬೈಲ್ ಬುಕ್ ಕಾರ್ಟ್ ಒಂದಕ್ಕೆ ಚಾಲನೆ ನೀಡಿದೆ.
ಶಾಲಾ ಪಠ್ಯ ಪುಸ್ತಕಗಳನ್ನು ಖರೀದಿ ಮಾಡಲು ಚೈತನ್ಯ ಇಲ್ಲದ ವಿದ್ಯಾರ್ಥಿಗಳಿಗೆ ಉಚಿತವಾಗಿ ಪುಸ್ತಕ ನೀಡಲು ಹಾಗೂ ಮುಂದಿನ ತರಗತಿಗಳಿಗೆ ಹೋಗಲಿರುವ ವಿದ್ಯಾರ್ಥಿಗಳು ತಮ್ಮ ಹಳೆಯ ಪುಸ್ತಕಗಳನ್ನು ಇಲ್ಲಿ ತಂದು ದಾನ ಮಾಡಲು ಅವಕಾಶವನ್ನು ಈ ವರ್ತುಲ ಮಾಡಿಕೊಟ್ಟಿದೆ.
ಎಲ್ಲಾ ಸ್ಟೇಷನರಿಗಳು ಮುಚ್ಚಿರುವ ಈ ಕಾಲಘಟ್ಟದಲ್ಲಿ ಈ ಕಾರ್ಟ್ ತೆರೆದಿರುವುದು ಇತರರಿಗೂ ಸಹ ಸ್ಫೂರ್ತಿಯಾಗಬಲ್ಲದಾಗಿದೆ.