ನವದೆಹಲಿ: ಜೂನ್ 21 ರಂದು ಮಣ್ಣೆತ್ತಿನ ಅಮಾವಾಸ್ಯೆ ದಿನ ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು ಭಾರತದ ಹಲವೆಡೆ ಗೋಚರಿಸಲಿದೆ.
ಗ್ರಹಣದ ಸಂದರ್ಭದಲ್ಲಿ ರಾಜಸ್ಥಾನ, ಪಂಜಾಬ್, ಹರಿಯಾಣ ಸೇರಿ ಹಲವು ರಾಜ್ಯಗಳಲ್ಲಿ ಸೂರ್ಯ ಕಂಕಣಾಕೃತಿಯಲ್ಲಿ ಕಾಣಿಸಲಿದೆ. ಕರ್ನಾಟಕ ಸೇರಿದಂತೆ ಹಲವು ಕಡೆಗಳಲ್ಲಿ ಖಂಡಗ್ರಾಸ ಸೂರ್ಯಗ್ರಹಣ ಗೋಚರವಾಗಲಿದೆ.
ಬೆಂಗಳೂರಿನಲ್ಲಿ ಬೆಳಗ್ಗೆ 10.30 ಕ್ಕೆ ಗ್ರಹಣ ಕಾಲ ಆರಂಭವಾಗಲಿದ್ದು, ಮಧ್ಯಾಹ್ನ 1.32 ರಾಜ್ಯದ ವಿವಿಧ ನಗರಗಳಲ್ಲಿ ಗ್ರಹಣದ ಆರಂಭ ಮತ್ತು ಮೋಕ್ಷದ ಸಮಯದಲ್ಲಿ ವ್ಯತ್ಯಾಸ ಇರುತ್ತದೆ ಎಂದು ಹೇಳಲಾಗಿದೆ.