ಕೇರಳದಲ್ಲಿ ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ನೀಡಲಾಗುವ ಪ್ರಮಾಣ ಪತ್ರದಲ್ಲಿರುವ ಪ್ರಧಾನಿ ಮೋದಿ ಫೋಟೋವನ್ನ ತೆಗೆದು ಹಾಕಬೇಕು ಎಂದು ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಡೆಮಾಕ್ರಟಿಕ್ ಯೂತ್ ಫೆಡರೇಷನ್ ಆಫ್ ಇಂಡಿಯಾದ ನಾಯಕ ದೂರನ್ನ ಸಲ್ಲಿಸಿದ್ದಾರೆ.
ಕೇರಳ ರಾಜ್ಯ ಯುವ ಆಯೋಗದ ಸಹ ಸಂಯೋಕರಾಗಿರುವ ಮಿಧುನ್ ಶಾ, ಕೇರಳದಲ್ಲಿ ಈಗಾಗಲೇ ನೀತಿ ಸಂಹಿತೆ ಮಾದರಿ ಜಾರಿಯಲ್ಲಿದೆ. ಚುನಾವಣೆ ಹೊಸ್ತಿಲಲ್ಲಿ ಇರುವ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಫೋಟೋ ಪ್ರಮಾಣ ಪತ್ರದಲ್ಲಿ ಇರೋದು ಸೂಕ್ತವಲ್ಲ ಎಂದಿದ್ದಾರೆ. ಕೇರಳದಲ್ಲಿ ಏಪ್ರಿಲ್ 6ರಂದು ವಿಧಾನಸಭಾ ಚುನಾವಣೆ ನಡೆಯಲಿದೆ.