ಹಬ್ಬದ ಸಂಭ್ರಮಕ್ಕೆ ಕೋವಿಡ್-19 ಸಾಂಕ್ರಮಿಕ ಮಂಕು ಬಡಿಸಿರುವ ಹಿನ್ನೆಲೆಯಲ್ಲೂ ಸಹ ದಸರಾ ಆಚರಣೆ ತಕ್ಕ ಮಟ್ಟಿಗೆ ಸಾಗಿದೆ.
ಹೈದರಾಬಾದ್‌ನಲ್ಲಿ ಆಯೋಜಿಸಿರುವ ದುರ್ಗ ಪೂಜಾ ಪೆಂಡಾಲ್ ಒಂದರಲ್ಲಿ ದುರ್ಗಾ ಮಾತೆ ಅಸುರನ ರೂಪದಲ್ಲಿರುವ ಕೊರೊನಾ ವೈರಸ್ ಅನ್ನು ಕೊಲ್ಲುತ್ತಿರುವಂತೆ ಪ್ರತಿಮೆ ರಚಿಸಲಾಗಿದೆ. ಮಹಿಷಾಸುರನ ಜಾಗದಲ್ಲಿ ಕೋವಿಡ್-19 ವೈರಾಣುವಿನ ಆಕೃತಿಯನ್ನು ಇಡಲಾಗಿದೆ.
ರಾಕ್ಷಸ ಸ್ವರೂಪಿಯಾಗಿ ಕೋವಿಡ್-19 ವೈರಾಣು ಜನರನ್ನು ಕಾಡುತ್ತಿರುವ ಬಗೆಯನ್ನು ಮೂರ್ತಿಯ ರೂಪದಲ್ಲಿ ತೋರಲು ಕೋಲ್ಕತ್ತಾದಿಂದ ಶಿಲ್ಪಿಗಳನ್ನು ಕರೆಯಿಸಿ ಈ ವಿಶೇಷವಾದ 31 ಅಡಿಯ ಪ್ರತಿಮೆ ನಿರ್ಮಿಸಲಾಗಿದೆ ಎಂದು ಪೆಂಡಾಲ್ ಆಯೋಜಕ ಗುಲಾಬ್ ಶ್ರೀನಿವಾಸ್ ತಿಳಿಸಿದ್ದಾರೆ.