
ಭಾರತದಲ್ಲಿ ವಿಳಾಸ ಪತ್ತೆ ಮಾಡಲು ಅಂಚೆ ವಿಳಾಸವೇ ಆಗಬೇಕೆಂದೇನಿಲ್ಲ. ಇನ್ ಫ್ಯಾಕ್ಟ್, ಇಲ್ಲೆಲ್ಲಾ ಏನಿದ್ದರೂ, ’ಸೀದಾ ಬಂದು ಡೆಡ್ ಎಂಡ್ ಅಲ್ಲಿ ರೈಟ್ ತಿರುಗಿದರೆ….’, ’ಕಟ್ಟೆ ಬಳಿ ಎಡ/ಬಲಕ್ಕೆ ಮೊದಲ ಮನೆ’, ’ಕಾಕಾ ಅಂಗಡಿ ಪಕ್ಕದಲ್ಲೇ ಇದೆ ಮನೆ’ ಟೈಪ್‌ನಲ್ಲಿ ಅಡ್ರೆಸ್ ಹುಡುಕೋ ಜುಗಾಡ್ ಐಡಿಯಾಗಳದ್ದೇ ಕಾರುಬಾರು.
ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್‌ಗೆ ತನ್ನ ಮನೆಯ ಡೆಲಿವರಿ ಅಡ್ರೆಸ್ ಕೊಟ್ಟಿರುವ ಭೂಪನೊಬ್ಬ ಇಂಥದ್ದೇ ಜುಗಾಡ್ ಕೆಲಸ ಮಾಡಿದ್ದಾನೆ. ನಿಖರವಾದ ಪೋಸ್ಟಲ್ ವಿಳಾಸದ ಬದಲಿಗೆ, ತನ್ನ ಮನೆಗೆ ಹೇಗೆ ತಲುಪಬಹುದೆಂಬ ಸೂಚನೆಗಳನ್ನು ವಿಳಾಸದ ವಿವರವಾಗಿ ಕೊಟ್ಟಿದ್ದಾನೆ ಈತ.
“ಪಾಶಾ ಬಾಯ್ ಅವರ ಅಂಗಡಿ ಹತ್ತಿರ ಬಂದು ಸಲೀಂ ಲಾಲಾ ಅಂತ ಹೇಳಿ, ಅವರು ನಿಮ್ಮನ್ನು ಮನೆವರೆಗೂ ಕರೆದುಕೊಂಡು ಬಂದು ಬಿಡುತ್ತಾರೆ” ಎಂದು ವಿಳಾಸದ ವಿವರದಲ್ಲಿ ಬರೆಯಲಾಗಿದೆ. ಹೈದರಾಬಾದ್ ನಗರದಲ್ಲಿರುವ ವಿಳಾಸವೊಂದನ್ನು ಹೀಗೆ ವಿವರಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಡೆಲಿವರಿ ವಿಳಾಸದ ಸ್ಕ್ರೀನ್‌ಶಾಟ್ ತೆಗೆದುಕೊಂಡ ಟ್ವಿಟರ್ ಬಳಕೆದಾರರೊಬ್ಬರು ಅದನ್ನು ಶೇರ್ ಮಾಡಿಕೊಂಡಿದ್ದಾರೆ.