ಹೋಳಿ ಕೇವಲ ಬಣ್ಣಗಳ ಹಬ್ಬ ಮಾತ್ರವಾಗಿರದೇ ’ಮಸ್ತಿ’ ಮಾಡಲು ಒಳ್ಳೆ ಸಮಯವೂ ಆಗಿದೆ. ಉತ್ತರ ಪ್ರದೇಶದ ಪ್ರತಾಪ್‌ಘಡದ ವ್ಯಕ್ತಿಯೊಬ್ಬ ಈ ’ಮಸ್ತಿ’ಯನ್ನು ತೀರಾ ವಿಪರೀತ ಮಟ್ಟಕ್ಕೆ ಕೊಂಡೊಯ್ದಿದ್ದಾನೆ.
ಕೋವಿಡ್-19 ಕಾರಣದಿಂದಾಗಿ ಈ ವರ್ಷದ ಹೋಳಿ ಆಚರಣೆ ಕೊಂಚ ಮಂಕಾಗಿದ್ದರೂ ಸಹ ಈತನಿಗೆ ಮಸ್ತಿ ಮಾಡುವ ಆಸೆಯಲ್ಲಿ ಸ್ವಲ್ಪವೂ ಕಮ್ಮಿ ಇರಲಿಲ್ಲ. ಮದಿರೆಯ ನಶೆ ಸಿಕ್ಕಾಪಟ್ಟೆ ಆಗಿ 50 ಅಡಿ ಎತ್ತರದ ನೀರಿನ ಟ್ಯಾಂಕ್ ಒಂದನ್ನು ಏರಿ ತನ್ನ ಮೊಬೈಲ್‌ನಲ್ಲಿ ಹಾಡುಗಳನ್ನು ಹಾಕಿಕೊಂಡು ಡ್ಯಾನ್ಸ್ ಮಾಡಿದ್ದಾನೆ ಈತ.
ಹೋಳಿ ಬಣ್ಣದಲ್ಲಿ ಮಿಂದಿರುವ ಈ ವ್ಯಕ್ತಿ ಮೈಮೇಲೆ ಅರಿವೇ ಇಲ್ಲದಂತೆ ಕುಣಿಯುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಲಾಗಿದೆ. ನೆಟ್ಟಗೆ ನಿಲ್ಲಲೂ ಆಗದೇ ಇರುವ ಮಟ್ಟಿಗೆ ತೂರಾಡುತ್ತಿರುವ ಈತ ಅಷ್ಟು ಎತ್ತರಕ್ಕೆ ಅದು ಹೇಗೆ ಏರಿದ ಎಂಬುದು ಇನ್ನೂ ತಿಳಿದುಬಂದಿಲ್ಲ.
ಬೆರಗಾಗಿಸುವಂತಿದೆ ವಿಕಲ ಚೇತನ ಯುವತಿಯ ಅದ್ಬುತ ಸಾಧನೆ
ಈತನ ಆಟವನ್ನು ನೋಡುತ್ತಿದ್ದ ಜನರು ಪೊಲೀಸರನ್ನು ಕರೆಯಿಸಿ ಆ ಟ್ಯಾಂಕ್ ಮೇಲಿನಿಂದ ಇಳಿಸಿದ್ದಾರೆ. ಇದೇ ಥರ ಫುಲ್ ಟೈಟ್ ಆಗಿದ್ದ ಮೂಡ್‌ನಲ್ಲಿದ್ದ ಇಬ್ಬರು ಕುಡುಕರು ಒಬ್ಬರ ಮೇಲೊಬ್ಬರು ಬಿದ್ದುಕೊಂಡು ನಾಗಿನ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದನ್ನು ಹಿಂದಿನ ವರ್ಷವೊಂದರ ಹೋಳಿ ಹಬ್ಬದ ಆಚರಣೆ ವೇಳೆ ರೆಕಾರ್ಡ್ ಮಾಡಿ ಶೇರ್ ಮಾಡಲಾಗಿತ್ತು.