ಭಾರತೀಯ ಸಾಂಪ್ರದಾಯಿಕ ಉಡುಗೆಗಳಲ್ಲೊಂದಾದ ಲೆಹೆಂಗಾಗಳ ಒಳಗೆ 1.7 ಕೋಟಿ ರೂಪಾಯಿ ಮೌಲ್ಯದ ಡ್ರಗ್ಗಳನ್ನ ಸಾಗಿಸುತ್ತಿದ್ದ ತಂಡವನ್ನ ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಆಸ್ಟ್ರೇಲಿಯಾಗೆ ಈ ಲೆಹೆಂಗಾಗಳನ್ನ ರವಾನೆ ಮಾಡುತ್ತಿದ್ದ ವೇಳೆ ಮಾಹಿತಿ ಕಲೆ ಹಾಕಿದ ಗುಪ್ತಚರ ಇಲಾಖೆ ಕಸ್ಟಮ್ಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು ಈ ಸರಕನ್ನ ದೆಹಲಿಯಲ್ಲಿ ವಶಪಡಿಸಿಕೊಳ್ಳಲಾಗಿದೆ.
ಈ ಲೆಹೆಂಗಾಗಳ ಒಳಗೆ 3900 ಗ್ರಾಂನ ಎಂಡಿಎಂಎ ಡ್ರಗ್ ಇತ್ತು ಎನ್ನಲಾಗಿದೆ. ಈ ಎಂಡಿಎಂಎ ಡ್ರಗ್ಗಳ ಅತಿಯಾದ ಸೇವನೆಯಿಂದ ಲಿವರ್, ಕಿಡ್ನಿ ಹಾಗೂ ಹೃದಯಕ್ಕೆ ಹಾನಿ ಉಂಟಾಗಿ ವ್ಯಕ್ತಿ ಸಾವನ್ನಪ್ಪುವ ಸಾಧ್ಯತೆ ಇದೆ.