ಮುಂಬೈ: ಮಾದಕ ದ್ರವ್ಯ ಮಾರಾಟದ ಆರೋಪದ ಮೇಲೆ ಬಂಧಿತನಾಗಿ ವಿಚಾರಣೆ ಎದುರಿಸುತ್ತಿರುವ ವಿದ್ಯಾರ್ಥಿಗೆ ಆನ್ ಲೈನ್ ನಲ್ಲಿ ಪದವಿ ಪರೀಕ್ಷೆ ಬರೆಯಲು ನ್ಯಾಯಾಲಯ ಅನುಮತಿ ನೀಡಿದೆ.
ಆರೋಪಿ ಅಬ್ದೆಲ್ ಪರಿಹಾರ್ ಗೆ ಮಾದಕ ದ್ರವ್ಯ ಹಾಗೂ ಮಾನಸಿಕ ವಿಷಯಗಳ ವಿಶೇಷ ನ್ಯಾಯಾಲಯ(ಎನ್.ಡಿ.ಪಿ.ಎಸ್. ಕೋರ್ಟ್) ಜೈಲಿನಲ್ಲಿಯೇ ಇದ್ದು ಗೂಗಲ್ ಮೀಟ್ ನಲ್ಲಿ ಪರೀಕ್ಷೆ ಎದುರಿಸಲು ಅನುಮತಿ ನೀಡಿದ್ದು, ಅದಕ್ಕೆ ಸೂಕ್ತ ವ್ಯವಸ್ಥೆ ಮಾಡುವಂತೆ ಹಾಗೂ ಪರೀಕ್ಷೆಯ ಮೇಲ್ವಿಚಾರಣೆ ಮಾಡುವಂತೆ ತಲೋಜಾ ಸೆಂಟ್ರಲ್ ಜೈಲ್ ನ ಅಧೀಕ್ಷಕರಿಗೆ ಸೂಚಿಸಿದೆ.
ಆರೋಪಿ ಪರಿಹಾರ್ ನ ತಂದೆ ಪರೀಕ್ಷಾ ಸಾಮಗ್ರಿಗಳನ್ನು ಜೈಲಿಗೆ ತಂದುಕೊಡಲು ಅನುಮತಿಸಿದ್ದು, ಪರಿಹಾರ್ ಆರ್ಕಿಟೆಕ್ಚರ್ ವಿಭಾಗದ, 10 ನೇ ಸೆಮಿಸ್ಟರ್ ಪರೀಕ್ಷೆ ಬರೆಯಲಿದ್ದಾನೆ.