ದಿಲ್ಲಿಯ ಪ್ರಾದೇಶಿಕ ಸಂಚಾರ ಅಧಿಕಾರಿ (ಆರ್ ಟಿ ಒ) ಕಚೇರಿಯಲ್ಲಿ ಚಾಲನಾ ಪರವಾನಗಿ ಕೊಡಿಸಲು ಬರೋಬ್ಬರಿ 37 ಸಾವಿರ ರೂ.ಗೆ ಬೇಡಿಕೆಯಿಟ್ಟ ದಲ್ಲಾಳಿಯನ್ನು ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಮೂಲಕ ಆರ್ ಟಿ ಒ ಕಚೇರಿಯಲ್ಲಿನ ಬಹುದೊಡ್ಡ ಭ್ರಷ್ಟಾಚಾರ ಜಾಲವನ್ನು ಸಿಬಿಐ ಪೊಲೀಸರು ಭೇದಿಸಿದಂತಾಗಿದೆ. ಬಲ್ಜೀತ್ ಕೌರ್ ಬಂಧಿತ ದಲ್ಲಾಳಿ.
ಚಾಲನಾ ಪರವಾನಗಿಗೆಂದು ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದರು. ಅವರನ್ನು ಸಂಪರ್ಕಿಸಿದ ಕೌರ್, ಯಾವುದೇ ಪರೀಕ್ಷೆಗಳಿಲ್ಲದೆಯೇ ಚಾಲನಾ ಪರವಾನಗಿ ಕೊಡಿಸುವುದಾಗಿ ಹೇಳಿದ್ದೂ ಅಲ್ಲದೆ, 37 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದಾನೆ.
ಈತನ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ದಾಳಿ ನಡೆಸಿದ ಸಿಬಿಐ ಪೊಲೀಸರು, ಬಲ್ಜೀತ್ ನನ್ನ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಅನೇಕ ಆರ್ ಟಿ ಒ ಅಧಿಕಾರಿಗಳ ಸತ್ಯ ಬಯಲಾಗಲಿದೆ.