
ಕೊರೊನಾ ವೈರಸ್ ವಿರುದ್ಧ ನಿರ್ಣಾಯಕ ಪಾತ್ರ ವಹಿಸಲಿರುವ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಯಾರಿಸಿರುವ 2 ಡಿಜಿ ಔಷಧಿ ಬಿಡುಗಡೆಯಾಗಿದೆ. ಔಷಧವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷ್ ವರ್ಧನ್ ಬಿಡುಗಡೆ ಮಾಡಿದ್ದಾರೆ.
ಡಿಆರ್‌ಡಿಒ ಪ್ರಕಾರ, 2-ಡಿಯೋಕ್ಸಿ-ಡಿ-ಗ್ಲೂಕೋಸ್ ಔಷಧಿಯನ್ನು, ಐಎನ್‌ಎಂಎಎಸ್, ಡಾ. ರೆಡ್ಡಿ ಲ್ಯಾಬ್ ನಲ್ಲಿ ಪ್ರಯೋಗ ಮಾಡಲಾಗಿದೆ. ಯಶಸ್ವಿ ಕ್ಲಿನಿಕಲ್ ಪ್ರಯೋಗದ ನಂತ್ರ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ, ಔಷಧಿಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಲು ಅನುಮೋದಿಸಿತು. ಈ ಔಷಧಿ ಸಾಚೆಟ್‌ನಲ್ಲಿ ಲಭ್ಯವಾಗಲಿದೆ. ರೋಗಿಗಳು ಇದನ್ನು ನೀರಿನಲ್ಲಿ ಕರಗಿಸಿ ಕುಡಿಯಬೇಕಾಗುತ್ತದೆ.
ಗ್ಲೂಕೋಸ್ ಆಧಾರಿತ ಈ ಔಷಧಿಯನ್ನು ಸೇವಿಸುವುದರಿಂದ ಕೊರೊನಾ ರೋಗಿಗಳು ಕೃತಕ ಆಕ್ಸಿಜನ್ ಹೆಚ್ಚು ಅವಲಂಬಿಸಬೇಕಾಗಿಲ್ಲ. ಅವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ. ಕ್ಲಿನಿಕಲ್ ಪ್ರಯೋಗದ ಸಮಯದಲ್ಲಿಯೂ ಈ ಔಷಧಿಯನ್ನು ನೀಡಿದ ಕೊರೊನಾ ರೋಗಿಗಳ ಆರ್‌ಟಿ-ಪಿಸಿಆರ್ ವರದಿ ಶೀಘ್ರದಲ್ಲೇ ನಕಾರಾತ್ಮಕವಾಗಿದೆ. ಈ ಔಷಧವು ನೇರವಾಗಿ ವೈರಸ್‌ನಿಂದ ಪ್ರಭಾವಿತವಾದ ಜೀವಕೋಶಗಳನ್ನು ಸೇರುತ್ತದೆ. ವೈರಸ್ ಶಕ್ತಿಯ ಉತ್ಪಾದನೆಯನ್ನು ನಿಲ್ಲಿಸುತ್ತದೆ. ವೈರಸ್ ಬೆಳೆಯದಂತೆ ತಡೆಯುತ್ತದೆ. ಶೀಘ್ರದಲ್ಲೇ ಇದು ಇಡೀ ದೇಶದಲ್ಲಿ ಲಭ್ಯವಾಗಲಿದೆ.
