ಲಾಕ್ಡೌನ್ ಸಡಿಲವಾಗುತ್ತಿದ್ದಂತೆ ವೇಶ್ಯಾವಾಟಿಕೆ ಶುರುವಾಗಿದ್ದು, ಸ್ನಾನ, ಮಾಸ್ಕ್, ಗ್ಲೌಸ್ ಕಡ್ಡಾಯ ಸೇರಿ ಮಾರ್ದರ್ಶಿ ಸೂತ್ರ ಸಿದ್ಧಪಡಿಸಲಾಗಿದೆ.
ಲಾಕ್ಡೌನ್ ಸಂದರ್ಭದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಪುಣೆಯ ವೇಶ್ಯಾವಾಟಿಕೆ ಕೇಂದ್ರಗಳು ಆರಂಭವಾಗಿವೆ. ಪುಣೆಯ ಬುಧವಾರ್ ಪೇಟೆಯಲ್ಲಿನ ರೆಡ್ ಲೈಟ್ ಪ್ರದೇಶದಲ್ಲಿ ಸುಮಾರು 3000 ಕ್ಕೂ ಅಧಿಕ ವೇಶ್ಯಾವಾಟಿಕೆ ವೃತ್ತಿಯಲ್ಲಿ ತೊಡಗಿರುವ ಮಹಿಳೆಯರಿದ್ದು ತಮ್ಮ ವೃತ್ತಿಯನ್ನು ಆರಂಭಿಸಿದ್ದಾರೆ.
ಸಹೇಲಿ ಎನ್.ಜಿ.ಒ. ಸಂಘಟನೆಯ ನೆರವಿನಿಂದ ವೇಶ್ಯಾವಾಟಿಕೆ ವೃತ್ತಿ ಪುನಾರಂಭಿಸಿದ್ದು ಲೈಂಗಿಕ ಕ್ರಿಯೆ ನಡೆಸಲು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗಿದೆ. ಈ ಕುರಿತಾಗಿ ವೇಶ್ಯಾವೃತ್ತಿಯಲ್ಲಿ ತೊಡಗಿದ ಸೆಕ್ಸ್ ವರ್ಕರ್ ಗಳಿಗೆ ತರಬೇತಿ ನೀಡಲಾಗಿದೆ.
ಗಿರಾಕಿಗಳು ವೇಶ್ಯಾಗೃಹ ಪ್ರವೇಶಿಸಿದ ಕೂಡಲೇ ಸ್ನಾನ ಮಾಡಬೇಕು. ಮುಖಕ್ಕೆ ಮಾಸ್ಕ್ ಮತ್ತು ಕೈಗೆ ಗ್ಲೌಸ್ ಧರಿಸಿಕೊಂಡು ರೂಮ್ ಪ್ರವೇಶಿಸಬೇಕು. ವೃತ್ತಿನಿರತ ಮಹಿಳೆಯರು ಕೂಡ ಮಾಸ್ಕ್ ಮತ್ತು ಗ್ಲೌಸ್ ಧರಿಸಿ ಕಾಂಡೊಮ್ ಕಡ್ಡಾಯವಾಗಿ ಬಳಸಿ ಲೈಂಗಿಕ ಕ್ರಿಯೆ ನಡೆಸಬೇಕು. ಎಲ್ಲಾ ವೇಶ್ಯಾಗೃಹಗಳ ಹೊರಗೆ ದೇಹದ ಉಷ್ಣತೆ ಪರೀಕ್ಷಿಸುವ ಉಪಕರಣ, ಸ್ಯಾನಿಟೈಸರ್ ಇರಿಸಬೇಕು ಎಂದು ತಿಳಿಸಲಾಗಿದೆ.
ಹೀಗೆ ಮಾರ್ಗದರ್ಶಿ ಸೂತ್ರಗಳಿಗೆ ಅನುಸಾರವಾಗಿ ಬುಧವಾರ್ ಪೇಟೆಯಲ್ಲಿರುವ ರೆಡ್ ಲೈಟ್ ಪ್ರದೇಶದಲ್ಲಿ ವೇಶ್ಯಾವಾಟಿಕೆ ಪುನರಾರಂಭಗೊಂಡಿದೆ.