
ಆದರೆ ಕೇಂದ್ರ ಸರ್ಕಾರ ಡಬಲ್ ಮಾಸ್ಕ್ ಧರಿಸುವ ವೇಳೆಯಲ್ಲಿ ಜನತೆ ಏನನ್ನ ಮಾಡಬೇಕು ಹಾಗೂ ಯಾವುದನ್ನ ಮಾಡಬಾರದು ಅನ್ನೋದರ ಕುರಿತು ಮಾಹಿತಿಯನ್ನ ರಿಲೀಸ್ ಮಾಡಿದೆ.
ಡಬಲ್ ಮಾಸ್ಕ್ ಹಾಕುವವರು ಒಂದು ಸರ್ಜಿಕಲ್ ಮಾಸ್ಕ್ ಹಾಗೂ 2-3 ಪದರಗಳುಳ್ಳ ಬಟ್ಟೆಯ ಮಾಸ್ಕ್ನ್ನು ಹೊಂದಿರಬೇಕು.
ಮೂಗಿನ ಬಳಿಯಲ್ಲಿ ಗಟ್ಟಿಯಲ್ಲಿ ಪ್ರೆಸ್ ಮಾಡಿಕೊಳ್ಳುವ ವ್ಯವಸ್ಥೆ ಇರಬೇಕು.
ಉಸಿರಾಟಕ್ಕೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಬೇಕು.
ಬಟ್ಟೆ ಮಾಸ್ಕ್ನ್ನು ಬಳಸಿದ ಬಳಿಕ ತೊಳೆಯಬೇಕು.
ಒಂದೇ ಬಗೆಯ ಮಾಸ್ಕ್ಗಳಿಂದ ಡಬಲ್ ಮಾಸ್ಕ್ ಮಾಡಿಕೊಳ್ಳಬೇಡಿ.
ಒಂದೇ ಮಾಸ್ಕ್ನ್ನು ನಿರಂತರ ಎರಡು ದಿನಗಳ ಕಾಲ ಬಳಕೆ ಮಾಡಬೇಡಿ.
ಸರಿಯಾದ ಅಳತೆಯ ಡಬಲ್ ಮಾಸ್ಕ್ಗಳು ಕೊರೊನಾ ವೈರಾಣುಗಳನ್ನ ದೇಹದಿಂದ ಇನ್ನಷ್ಟು ದೂರ ಇಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ದೇಶದಲ್ಲಿ ಸದ್ಯ ವೈದ್ಯಕೀಯ ಸೌಲಭ್ಯಗಳ ಅಭಾವವೂ ಕಂಡು ಬರ್ತಿರೋ ಈ ಸಂದರ್ಭದಲ್ಲಿ ಮಾಸ್ಕ್ಗಳ ಸಹಾಯದಿಂದ ಸೋಂಕಿನಿಂದ ದೂರ ಇರೋದೇ ಒಳ್ಳೆಯದಾಗಿದೆ.