alex Certify ಪಾಕಿಸ್ತಾನದಲ್ಲೂ ಅತಿ ಹೆಚ್ಚು ವೀಕ್ಷಕರನ್ನು ಹೊಂದಿದೆ ಭಾರತದ ಈ ಚಾನೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಾಕಿಸ್ತಾನದಲ್ಲೂ ಅತಿ ಹೆಚ್ಚು ವೀಕ್ಷಕರನ್ನು ಹೊಂದಿದೆ ಭಾರತದ ಈ ಚಾನೆಲ್

ಕೊರೊನಾ ಸಂದರ್ಭದಲ್ಲಿ ಮಾಧ್ಯಮಗಳನ್ನು ವೀಕ್ಷಿಸುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಜನರು ಹೆಚ್ಚಿನ ಪ್ರಮಾಣದಲ್ಲಿ ಟಿವಿ ವೀಕ್ಷಣೆ ಮಾಡಿದ್ದರು. ಅದ್ರಲ್ಲೂ ದೂರದರ್ಶನವನ್ನು ವೀಕ್ಷಿಸಿದವರ ಸಂಖ್ಯೆ ಹೆಚ್ಚಿತ್ತು. ಈಗ ಪ್ರಸಾರ ಭಾರತಿ ದೂರದರ್ಶನ ಮತ್ತು ಅಖಿಲ ಭಾರತ ರೆಡಿಯೋದ ಡಿಜಿಟಲ್ ಚಾನೆಲ್ ಗಳು ಹೊಸ ದಾಖಲೆಯನ್ನು ಬರೆದಿವೆ.

ಕಳೆದ 2020 ರಲ್ಲಿ ಇವೆರಡರ ಡಿಜಿಟಲ್ ಬೆಳವಣಿಗೆ ಶೇಕಡಾ 100ರಷ್ಟು ಹೆಚ್ಚಾಗಿದೆ. ಭಾರತದ ಪ್ರಮುಖ ಮಾಹಿತಿ ಮತ್ತು ಸಂವಹನ ಮಾಧ್ಯಮಗಳು ಒಂದು ವರ್ಷದಲ್ಲಿ ಒಂದು ಶತಕೋಟಿಗೂ ಹೆಚ್ಚು ವೀಕ್ಷಣೆಗಳನ್ನು ಪಡೆದಿವೆ. ಅದೇ ಸಮಯದಲ್ಲಿ ಎರಡೂ ಚಾನೆಲ್ ಗಳ ವೀಕ್ಷಣೆ ಸಮಯ 6 ಬಿಲಿಯನ್ ನಿಮಿಷಗಳಿಗಿಂತಲೂ ಹೆಚ್ಚಾಗಿದೆ.

ಇಷ್ಟೇ ಅಲ್ಲ, ಪಾಕಿಸ್ತಾನದಲ್ಲೂ ದೂರದರ್ಶನ ಹಾಗೂ ರೆಡಿಯೋ ಜನಪ್ರಿಯತೆ ಮೊದಲ ಸ್ಥಾನದಲ್ಲಿದೆ. 2020ರಲ್ಲಿ ಡಿಡಿ ಹಾಗೂ ಆಕಾಶವಾಣಿ ಪಾಕಿಸ್ತಾನದಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಪಡೆದಿದೆ. ಭಾರತದ ನಂತ್ರ ಪಾಕ್ ಹೆಚ್ಚು ದೂದರ್ಶನ ವೀಕ್ಷಣೆ ಮಾಡಿದ ದೇಶವಾಗಿದೆ. ಇದ್ರ ನಂತ್ರ ಅಮೆರಿಕಾ ಮೂರನೇ ಸ್ಥಾನದಲ್ಲಿದೆ.

ಅಮೆರಿಕಾದಲ್ಲಿರುವ ಭಾರತೀಯರು ದೂರದರ್ಶನ ವೀಕ್ಷಿಸಿದ್ದಾರೆ. ಕಳೆದ 2020 ರಲ್ಲಿ ಪ್ರಸಾರ್ ಭಾರತಿಯ ಅಧಿಕೃತ ಅಪ್ಲಿಕೇಶನ್ ನ್ಯೂಸ್ ಆನ್ ಏರ್ ಆ್ಯಪ್ 25 ಲಕ್ಷಕ್ಕೂ ಹೆಚ್ಚು ಹೊಸ ಬಳಕೆದಾರರನ್ನು ಪಡೆದುಕೊಂಡಿದೆ. ಮನ್ ಕಿ ಬಾತ್ ಯೂಟ್ಯೂಬ್ ಚಾನೆಲ್ ಮತ್ತು ಟ್ವಿಟರ್ ಹ್ಯಾಂಡಲ್ ಸಹ 2020 ರಲ್ಲಿ ಅಭೂತಪೂರ್ವ ಯಶಸ್ಸನ್ನು ಸಾಧಿಸಿದೆ. ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ 67,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...