ಕೊರೊನಾ ಸೋಂಕು ಹಿಂದೆಂದೂ ಕಾಣದ ರೀತಿಯಲ್ಲಿ ಏರಿಕೆ ಕಾಣ್ತಿದೆ. ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಲಾಕ್ಡೌನ್, ಲಾಕ್ಡೌನ್ ಮಾದರಿ ಅಘೋಷಿತ ಬಂದ್, ಕರ್ಫ್ಯೂ ಹೀಗೆ ಸಾಕಷ್ಟು ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಇವಿಷ್ಟು ಸರ್ಕಾರದ ಕೆಲಸವಾದರೆ ಇನ್ನು ನಾವು ಸೋಂಕು ನಿಯಂತ್ರಣಕ್ಕೆ ಯಾವ ರೀತಿಯಲ್ಲಿ ಪ್ರಯತ್ನ ಪಡಬಹುದು…?
ಗುಜರಾತ್ನ ಕರಮ್ಸಾದ್ ದ ಪ್ರಮುಖ್ಸ್ವಾಮಿ ವೈದ್ಯಕೀಯ ಕಾಲೇಜಿನ ವೈದ್ಯ ಹರಿಯಾಕ್ಸ್ ಪಾಠಕ್ ಕೋವಿಡ್ ವಿಚಾರದಲ್ಲಿ ಜನಸಾಮಾನ್ಯರು ಮಾಡುವ ಸಾಮಾನ್ಯ ತಪ್ಪುಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
ಜನರು ಮಾಡುವ ಸಾಮಾನ್ಯ ತಪ್ಪು ಅಂದರೆ ಸರಿಯಾದ ಕ್ರಮದಲ್ಲಿ ಮಾಸ್ಕ್ನ್ನು ಹಾಕಿಕೊಳ್ಳದೇ ಇರೋದು. ಸಾರ್ವಜನಿಕ ಸ್ಥಳಗಳಲ್ಲಿ ಮಾತನಾಡುವ ಸಂದರ್ಭ ಬಂದಾಗ ಮಾಸ್ಕ್ ತೆಗೆಯಲೇಬೇಡಿ. ಆಹಾರ ಸೇವನೆ ವೇಳೆ ಮಾತ್ರ ಮಾಸ್ಕ್ಗಳನ್ನ ತೆಗೆದಿಡಿ. ನಿಮ್ಮ ಮಾಸ್ಕ್ ಮುಖಕ್ಕೆ ಸರಿಯಾಗಿ ಫಿಟ್ ಆಗ್ತಿಲ್ಲ ಎಂದರೆ ಅದು ಸರಿಯಾಗಿ ಕೆಲಸ ಮಾಡೋದಿಲ್ಲ ಎಂದೇ ಅರ್ಥ ಎಂದು ಹೇಳಿದ್ದಾರೆ.
ಅಲ್ಲದೇ ಮಾಸ್ಕ್ಗಳನ್ನ ಎಂದಿಗೂ ವಾಶ್ ಮಾಡಬೇಡಿ. ಎನ್ 95 ಹಾಗೂ ಸರ್ಜಿಕಲ್ ಮಾಸ್ಕ್ಗಳನ್ನ ತೊಳೆದು ಬಳಸಲೇಬಾರದು. ಒಮ್ಮೆ ಮಾಸ್ಕ್ಗಳನ್ನ ತೊಳೆದ ಬಳಿಕ ಅದು ತನ್ನ ಪರಿಣಾಮಕಾರತ್ವವನ್ನ ಕಳೆದುಕೊಳ್ಳುತ್ತೆ. ಮಾಸ್ಕ್ ಬಳಕೆ ಮಾಡಿದ ಬಳಿಕ ಅದನ್ನ ಸೂರ್ಯದ ಶಾಖದಲ್ಲಿಡಿ. ಮೂರ್ನಾಲ್ಕು ಮಾಸ್ಕ್ಗಳನ್ನ ದಿನಕ್ಕೊಂದರಂತೆ ಬಳಸಿ. ಎರಡು ಮಾಸ್ಕ್ಗಳನ್ನ ಹಾಕಿಕೊಳ್ಳೋದು ಸಹ ಒಳ್ಳೆಯ ಕಾರ್ಯ ಎಂದು ಹೇಳಿದ್ರು.
ಕೊರೊನಾ ಸೋಂಕು ಬಂತು ಎಂದೊಡನೆಯೇ ಹೆದರುವ ಅವಶ್ಯಕತೆ ಇಲ್ಲ. ಕೊರೊನಾದಿಂದ ಬದುಕಿ ಬಂದವರೂ ಇದ್ದಾರೆ. ಕೊರೊನಾ ಬಂತು ಎಂದ ಮಾತ್ರಕ್ಕೆ ಸತ್ತೇ ಹೋಗುತ್ತೇನೆ ಎಂಬ ಭಯ ಬೇಡ ಎಂದು ಕಿವಿಮಾತು ಹೇಳಿದ್ರು.