ನಗರದಲ್ಲಿ ಹಕ್ಕಿ ಜ್ವರ ಪ್ರಕರಣ ಹೆಚ್ಚಾದ ಹಿನ್ನೆಲೆ ದೆಹಲಿ ಆರೋಗ್ಯ ಇಲಾಖೆ ಅರ್ಧ ಬೇಯಿಸಿದ ಮೊಟ್ಟೆ ಹಾಗೂ ಕೋಳಿಗಳನ್ನ ಸೇವಿಸದಂತೆ ಸೂಚನೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆ ದೆಹಲಿ ಆರೋಗ್ಯ ಇಲಾಖೆ ಈ ಸೂಚನೆಯನ್ನ ನೀಡಿದೆ.
ದೆಹಲಿಯ ಡೈರೆಕ್ಟರೇಟ್ ಜನರಲ್ ಆಫ್ ಹೆಲ್ತ್ ಸರ್ವೀಸಸ್ (ಡಿಜಿಹೆಚ್ಎಸ್) ಬುಧವಾರ ಹೊರಡಿಸಿದ ಸಲಹೆಯಲ್ಲಿ, “ಎಚ್ 5 ಎನ್ 8 ಪಕ್ಷಿಗಳಲ್ಲಿ ಹೆಚ್ಚು ರೋಗಕಾರಕವಾಗಿದೆ ಆದರೆ ಮಾನವರಲ್ಲಿ ರೋಗಕಾರಕತೆ ಮತ್ತು ಏವಿಯನ್ ಇನ್ಫ್ಲುಯೆನ್ಸ (ಎಹೆಚ್ 5 ಎನ್ 8) ವೈರಸ್ನೊಂದಿಗೆ ಮಾನವ ಸೋಂಕಿನ ಸಾಧ್ಯತೆ ಕಡಿಮೆ” ಎಂದು ಹೇಳಿದೆ.
70 ಡಿಗ್ರಿ ಸೆಲ್ಸಿಯಸ್ನಲ್ಲಿ 30 ನಿಮಿಷಗಳ ಕಾಲ ಸಂಪೂರ್ಣವಾಗಿ ಬೇಯಿಸಿದ ಮೊಟ್ಟೆ ಹಾಗೂ ಕೋಳಿ ಮಾಂಸಗಳನ್ನ ಮಾತ್ರ ಸೇವಿಸಿ. ಅರ್ಧ ಬೇಯಿಸಿದ ಕೋಳಿ ಹಾಗೂ ಮೊಟ್ಟೆಯನ್ನ ಸೇವಿಸದಂತೆ ಸಲಹೆ ನೀಡಲಾಗಿದೆ.
ಕಳೆದ ವಾರ ಕೇಂದ್ರ ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರಿಕೆ ಸಚಿವ ಗಿರಿರಾಜ್ ಸಿಂಗ್ ಕೆಲ ಸಲಹೆಗಳನ್ನ ಟ್ವೀಟ್ ಮಾಡಿ “ಮಾಂಸ ಮತ್ತು ಮೊಟ್ಟೆಗಳನ್ನು ಸರಿಯಾಗಿ ಬೇಯಿಸಿ ತಿಂದರೆ ಚಿಂತೆ ಇಲ್ಲ’ ಎಂದು ಹೇಳಿದ್ದರು. ಭೋಪಾಲ್ ಮೂಲದ ಪ್ರಯೋಗಾಲಯಕ್ಕೆ ಕಳುಹಿಸಿದ ಎಂಟು ಮಾದರಿಗಳನ್ನು ಏವಿಯನ್ ಇನ್ಫ್ಲುಯೆನ್ಸಕ್ಕೆ ಧನಾತ್ಮಕವಾಗಿ ಪರೀಕ್ಷಿಸಿದ ನಂತರ ದೆಹಲಿಯಲ್ಲಿ ಸೋಮವಾರ ಅನೇಕ ಪಕ್ಷಿ ಜ್ವರ (Bird Flu) ಪ್ರಕರಣಗಳು ದೃಢಪಟ್ಟಿವೆ.