ಕೊರೊನಾ ಲಸಿಕೆಯ ವಿಚಾರದಲ್ಲಿ ಯಾವುದೇ ವದಂತಿಗಳಿಗೆ ಕಿವಿಗೊಡದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಜನತೆಯಲ್ಲಿ ಮನವಿ ಮಾಡಿದ್ದಾರೆ.
ದೇಶದಲ್ಲಿ ಇಂದಿನಿಂದ ಕೊಡಲಾಗುತ್ತಿರುವ ಕೊರೊನಾ ಲಸಿಕೆ ಸುರಕ್ಷಿತವಾಗಿದೆ ಎಂದು ತಜ್ಞರೇ ಪ್ರಮಾಣೀಕರಿಸಿದ್ದಾರೆ, ಹೀಗಾಗಿ ಕೊರೊನಾ ಲಸಿಕೆ ಸುರಕ್ಷತೆ ವಿಚಾರದಲ್ಲಿ ಸಂದೇಹ ಬೇಡ ಎಂದು ಹೇಳಿದ್ದಾರೆ.
ದೆಹಲಿಯ ಲೋಕನಾಯಕ ಜಯ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ ನಡೆದ ಕೊರೊನಾ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಸಿಎಂ ಕೇಜ್ರಿವಾಲ್ ಭಾಗಿಯಾಗಿದ್ರು. ದೆಹಲಿಯ 81 ಕಡೆ ಲಸಿಕೆ ಕೇಂದ್ರಗಳನ್ನ ಸ್ಥಾಪಿಸಲಾಗಿದೆ.
ನಾನು ಲಸಿಕೆ ಸ್ವೀಕಾರ ಮಾಡಿದವರ ಜೊತೆ ಮಾತನಾಡಿದೆ. ಯಾರಿಗೂ ಕೂಡ ಯಾವುದೇ ತೊಂದರೆ ಉಂಟಾಗಿಲ್ಲ. ಕೊರೊನಾ ಲಸಿಕೆ ಸ್ವೀಕರಿಸಿದ ಬಗ್ಗೆ ಅವರೆಲ್ಲ ಸಂತಸದಲ್ಲೇ ಇದ್ದಾರೆ. ಲಸಿಕೆ ಬಗೆಗಿನ ತಪ್ಪು ಮಾಹಿತಿ ಹಾಗೂ ವದಂತಿಗಳ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ತಜ್ಞರೆ ಕೊರೊನಾ ಲಸಿಕೆ ಬಗ್ಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ. ಲಸಿಕೆ ಸಿಕ್ಕಿದೆ ಎಂಬ ಕಾಣಕ್ಕೆ ಮಾಸ್ಕ್ ಧರಿಸೋದು ಹಾಗೂ ಸಾಮಾಜಿಕ ಅಂತರವನ್ನ ಕಾಪಾಡೋದನ್ನ ಮರೆಯದಿರಿ ಎಂದು ಜನತೆಯಲ್ಲಿ ಇದೇ ವೇಳೆ ಮನವಿ ಮಾಡಿದ್ರು.