ಕೃಷಿಯೇತರ ಭೂಮಿಗಳ ನೋಂದಣಿ ಪ್ರಕ್ರಿಯೆಗೆ ಬರುವ ಮಂದಿಯ ಆಧಾರ್ ಕಾರ್ಡ್ ವಿವರಗಳನ್ನು ಕೇಳಬೇಡಿ ಎಂದು ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ ಕೊಟ್ಟಿದೆ.
ರಾಜ್ಯ ಸರ್ಕಾರದ ’ಧರಣಿ’ ಪೋರ್ಟಲ್ ಮುಖಾಂತರ ನಡೆಯುವ ಜಮೀನು ನೋಂದಣಿ ಪ್ರಕ್ರಿಯೆಯನ್ನು, ಜಾಲತಾಣದಲ್ಲಿರುವ ’ಆಧಾರ್’ ಕಾಲಂ ತೆರವುಗೊಳಿಸುವ ತನಕ ನಿಲ್ಲಿಸಲು ಹೈಕೋರ್ಟ್ ಆದೇಶ ನೀಡಿದೆ.
ಇದೇ ವೇಳೆ ಆಸ್ತಿ ಹಾಗೂ ಜಮೀನು ನೋಂದಣಿ ಮಾಡುವ ವೇಳೆ ಮಂದಿಯ ಜಾತಿ ಹಾಗೂ ಕುಟುಂಬದ ವಿವರಗಳನ್ನು ಕೇಳದಿರುವಂತೆಯೂ ಸಹ ನ್ಯಾಯಾಲಯ ಸೂಚಿಸಿದೆ.
ಇದೇ ವೇಳೆ, ಜನರಿಂದ ಪಡೆಯುವ ವೈಯಕ್ತಿಕ ವಿವರಗಳ ರಹಸ್ಯವನ್ನು ಅದೆಷ್ಟರ ಮಟ್ಟಿಗೆ ಕಾಪಾಡಿಕೊಳ್ಳಲಾಗುತ್ತಿದೆ ಎಂಬ ವಿಚಾರದ ಬಗ್ಗೆ ಆತಂಕ ವ್ಯಕ್ತಪಡಿಸಿದ ಕೋರ್ಟ್, ಜನರ ವೈಯಕ್ತಿಕ ವಿವರಗಳನ್ನು ಪಡೆಯುವ ಅಗತ್ಯ ಅಧಿಕಾರಿಗಳಿಗೆ ಇಲ್ಲವೆಂದು ಹೇಳಿದ್ದು, ಈ ವಿವರಗಳ ಭದ್ರತೆ ಕುರಿತಂತೆ ಕಳವಳ ವ್ಯಕ್ತಪಡಿಸಿದೆ.