ಮಂಗಳವಾರದಂದು ತಮಿಳುನಾಡು, ಕೇರಳ, ಪುದುಚೆರಿ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗೆ ಮತದಾನ ನಡೆದಿದ್ದು, ಇದರ ಜೊತೆಗೆ ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಮತದಾನ ನಡೆದಿದೆ.
ಮತದಾರರು ಅತ್ಯುತ್ಸಾಹದಿಂದ ಮತ ಚಲಾವಣೆ ಮಾಡಿದ್ದು, ಕೆಲವೆಡೆ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷವೂ ನಡೆದಿದೆ. ಈ ಚುನಾವಣೆಯಲ್ಲಿ ಸೆಲೆಬ್ರಿಟಿಗಳಿಂದ ಹಿಡಿದು ಶ್ರೀಸಾಮಾನ್ಯನವರೆಗೆ ಬಹುತೇಕ ಎಲ್ಲರೂ ತಮ್ಮ ಮತ ಚಲಾಯಿಸಿದ್ದಾರೆ.
‘ನಕಲು’ ಮಾಡಲು ಅವಕಾಶ ಸಿಗದ್ದಕ್ಕೆ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಪ್ರತಿಭಟನೆ
ಇದರ ಮಧ್ಯ ಕೆಲವೊಂದು ಸ್ವಾರಸ್ಯಕರ ಘಟನೆಗಳು ನಡೆದಿದ್ದು, ತಮಿಳುನಾಡಿನ ಈರೋಡ್, ದಿಂಡಿಗಲ್ ಮತ್ತು ಧರ್ಮಪುರಿ ಜಿಲ್ಲೆಯ ಕೆಲವು ಪ್ರದೇಶದಲ್ಲಿ ಕತ್ತೆಗಳ ಮೂಲಕ ಮತ ಯಂತ್ರ ಸಾಗಿಸಿರುವ ಘಟನೆ ನಡೆದಿದೆ.
ಗುಡ್ಡಗಾಡು ಪ್ರದೇಶದಲ್ಲಿ ಮತಗಟ್ಟೆಗಳಿದ್ದ ಕಾರಣ ಮತಯಂತ್ರ, ವಿವಿಪ್ಯಾಟ್ ಮತ್ತು ಮತದಾನದ ಇತರೆ ಸಾಮಗ್ರಿಗಳನ್ನು ಕತ್ತೆಗಳ ಮೂಲಕ ಸಾಗಿಸಲಾಗಿದ್ದು, ಚುನಾವಣಾ ಸಿಬ್ಬಂದಿ ಹಾಗೂ ಪೊಲೀಸರು ನಡೆದುಕೊಂಡೇ ಅಲ್ಲಿಗೆ ತೆರಳಿದ್ದಾರೆ.