ಆನ್ಲೈನ್ ತರಗತಿಗಳನ್ನ ಹೊರತುಪಡಿಸಿ ಕ್ಯಾಂಪಸ್ನ ಇನ್ಯಾವ ಸೇವೆಗಳೂ ಬಳಕೆಯಾಗದ ಕಾರಣ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಶುಲ್ಕವನ್ನ ಕಡಿಮೆ ಮಾಡಬೇಕು ಎಂದು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ನ್ಯಾಯಮೂರ್ತಿ ಎ. ಎಂ. ಖಾನ್ವಿಲ್ಕರ್ ಹಾಗೂ ದಿನೇಶ್ ಮಹೇಶ್ವರಿ ಕೊರೊನಾ ಕಾರಣದಿಂದಾಗಿ ದೇಶದ ಜನತೆ ಅನುಭವಿಸುತ್ತಿರುವ ಆರ್ಥಿಕ ಸಂಕಷ್ಟವನ್ನೂ ಶಾಲಾ ಆಡಳಿತ ಮಂಡಳಿ ಗಮನದಲ್ಲಿಡಬೇಕೆಂದು ಹೇಳಿದೆ.
ಶಾಲೆಯಲ್ಲಿ ನಡೆಸಲಾಗುವ ಚಟುವಟಿಕೆ ಹಾಗೂ ಶಾಲೆಗಳಲ್ಲಿ ಇರುವ ಸೌಲಭ್ಯಕ್ಕೆ ಸಂಬಂಧಿಸಿ ಶುಲ್ಕವನ್ನ ವಸೂಲಿ ಮಾಡಬೇಕು ಎಂಬ ಕಾನೂನಿಲ್ಲ. ಕೊರೊನಾದಿಂದಾಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಈ ಯಾವ ಸೌಲಭ್ಯಗಳನ್ನೂ ನೀಡಲಾಗಿಲ್ಲ. ಇಂತಹ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳು ಲಾಭದ ಹಿಂದೆ ಹೋಗುವುದು ಸರಿಯಲ್ಲ ಎಂದು ಹೇಳಿದೆ.
2020-21ನೇ ಸಾಲಿನಲ್ಲಿ ಲಾಕ್ಡೌನ್ ಹಾಗೂ ಕೊರೊನಾ ವೈರಸ್ ಕಾರಣದಿಂದಾಗಿ ಶಾಲೆಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಇದರಿಂದಾಗಿ ಶಾಲೆಗಳಲ್ಲಿ ಪೆಟ್ರೋಲ್ / ಡಿಸೇಲ್ ವೆಚ್ಚ, ಕರೆಂಟ್ ಬಿಲ್, ಮೆಂಟೇನೆನ್ಸ್ ವೆಚ್ಚ, ನೀರಿನ ವೆಚ್ಚ ಇವೆಲ್ಲದರಲ್ಲೂ ಶಿಕ್ಷಣ ಸಂಸ್ಥೆಗಳು ಉಳಿತಾಯ ಮಾಡಿವೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ವಿದ್ಯಾರ್ಥಿಗಳಿಗೆ ಶಾಲೆಗಳಿಂದ ನೀಡಲಾಗದ ಸೌಲಭ್ಯಗಳಿಗೂ ಶುಲ್ಕ ಕೇಳಿದರೆ ಅದು ಲಾಭದಾಯಕ ಎನಿಸಿಕೊಳ್ಳುತ್ತೆ ಎಂದು ಕೋರ್ಟ್ ಹೇಳಿದೆ.