ಮಾನವರಂತೆ ನಾಯಿಗಳೂ ಕೂಡ ರಕ್ತದಾನ ಮಾಡುವ ಮೂಲಕ ಬೇರೆ ನಾಯಿಗಳಿಗೆ ಮರು ಜೀವ ನೀಡಬಲ್ಲವು ಎಂದು ತೋರುವ ನಿದರ್ಶನವೊಂದು ಕೋಲ್ಕತ್ತಾದಲ್ಲಿ ಜರುಗಿದೆ.
ಸಿಯಾ ಹೆಸರಿನ ಲ್ಯಾಬ್ರಡಾರ್ ಶ್ವಾನವೊಂದು ಡ್ಯಾನಿ ಹೆಸರಿನ ಸ್ಪಿಟ್ಝ್ ತಳಿಯ ಶ್ವಾನಕ್ಕೆ ರಕ್ತದಾನ ಮಾಡಿ ಜೀವ ಉಳಿಸಿದೆ. ಚೆನ್ನೈ ವಾಸಿಯಾದ ಡ್ಯಾನಿಯನ್ನು ಕಿಡ್ನಿ ಸಮಸ್ಯೆಗೆ ಚಿಕಿತ್ಸೆಗಾಗಿ ಕೋಲ್ಕತ್ತಾಗೆ ಕರೆತರಲಾಗಿತ್ತು. ಈ ವೇಳೆ ಡ್ಯಾನಿಗೆ ರಕ್ತದ ಅಗತ್ಯವಿದ್ದಾಗ, ನೆರವಿಗೆ ಬಂದ ಸಿಯಾ ತನ್ನ ರಕ್ತ ನೀಡಿದ್ದಾಳೆ. ಚಿಕಿತ್ಸೆ ಫಲಕಾರಿಯಾದ ಬಳಿಕ ಡ್ಯಾನಿ ಚೇತರಿಸಿಕೊಂಡಿದ್ದು, ಆತನನ್ನು ಮತ್ತೆ ಚೆನ್ನೈಗೆ ಕರೆದುಕೊಂಡು ಹೋಗಲಾಗಿದೆ.
ಸಿಯಾ ಅದೆಷ್ಟು ಸೋಷಿಯಲ್ ಶ್ವಾನವೆಂದರೆ, ರಕ್ತವನ್ನು ತನ್ನ ದೇಹದಿಂದ ತೆಗೆದುಕೊಳ್ಳುವ ಆ 15 ನಿಮಿಷಗಳ ಕಾಲ ಬಹಳ ಕಾಮ್ ಆಗಿದ್ದಳು. ಈ ವೇಳೆ ಸಿಯಾ ಬಾಯಿಗೆ ಮಝಲ್ ಹಾಕಿರಲಿಲ್ಲ.