ರಾಜಕಾರಣಿಗಳ ಮನೆಗೆ ಹೋಗಿ ಚಿಕಿತ್ಸೆ ನೀಡುವುದು ಸೇರಿದಂತೆ ಸರ್ಕಾರಿ ಆಸ್ಪತ್ರೆಗಳಲ್ಲಿನ ವಿಐಪಿ ಸಂಸ್ಕೃತಿಯನ್ನ ಬಂದ್ ಮಾಡುವಂತೆ ಕೋರಿ ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದೆ.
ಮುಂಚೂಣಿ ಕಾರ್ಯಕರ್ತರಾಗಿ ಕೆಲಸ ಮಾಡುತ್ತಿರುವ ಆರೋಗ್ಯ ಸಿಬ್ಬಂದಿಗೆ ಯಾವುದೇ ಸೌಲಭ್ಯಗಳಿಲ್ಲ. ಆದರೆ ಚುನಾವಣಾ ರ್ಯಾಲಿಗಳನ್ನ ನಡೆಸಿ ಕೊರೊನಾ ವೈರಸ್ ಹರಡುವಿಕೆಗೆ ಕಾರಣರಾದ ರಾಜಕಾರಣಿಗಳು ಹಾಗೂ ಪಕ್ಷದ ಕಾರ್ಯಕರ್ತರಿಗೆ ಚಿಕಿತ್ಸೆಯಲ್ಲಿ ಆದ್ಯತೆ ನೀಡಲಾಗುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಪರೀಕ್ಷೆಗೆ ವಿಐಪಿ ಕೌಂಟರ್ ಇಡಲಾಗಿದೆ. ಇಲ್ಲಿ ಸಚಿವರು, ರಾಜಕಾರಣಿಗಳು ಸೇರಿದಂತೆ ಎಲ್ಲಾ ಪಕ್ಷದ ಕಾರ್ಯಕರ್ತರು ಪರೀಕ್ಷೆ ಮಾಡಿಸಿಕೊಳ್ತಾರೆ. ಆದರೆ ವೈದ್ಯರಿಗೆ ಈ ರೀತಿಯ ಯಾವುದೇ ಪ್ರತ್ಯೇಕ ಕೌಂಟರ್ ಇಲ್ಲ ಎಂದೂ ಉಲ್ಲೇಖಿಸಲಾಗಿದೆ.
ವೈದ್ಯಕೀಯವಾಗಿ ಈ ರೀತಿಯ ಸೂಚನೆ ಇಲ್ಲದೇ ಇದ್ದರೂ ಸಹ ಬಹುತೇಕ ಎಲ್ಲಾ ರಾಜಕಾರಣಿಗಳು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆ ವೈದ್ಯರನ್ನ ಮನೆಗೆ ಕರೆಸಿಕೊಳ್ತಿದ್ದಾರೆ ಎಂದು ದೂರಲಾಗಿದೆ.