ಕೊರೊನಾ ಸೋಂಕಿತರ ಸಂಖ್ಯೆ ದಿನ ದಿನಕ್ಕೂ ಹೆಚ್ಚಾಗ್ತಿದೆ. ಕೊರೊನಾ ಜೊತೆ ಫಂಗಲ್ ಇನ್ಫೆಕ್ಷನ್ ಬಗ್ಗೆ ಜನರಲ್ಲಿ ಭಯ ಶುರುವಾಗಿದೆ. ಕೊರೊನಾದಿಂದ ರಕ್ಷಣೆ ಪಡೆಯಲು ಜನರು ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಮುಂದಾಗಿದ್ದಾರೆ. ಗೋವಿನ ಸಗಣಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲಿದೆ ಎಂಬ ಸುದ್ದಿ ಹರಡಿದೆ.
ದೇಶದ ಕೆಲ ಭಾಗಗಳಲ್ಲಿ ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ಳಲಾಗ್ತಿದೆ. ಸಗಣಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂಬ ನಂಬಿಕೆಯಲ್ಲಿ ಜನರಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಸಂಶೋಧನೆ ನಡೆದಿಲ್ಲ. ಹಾಗಾಗಿ ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ಳಬೇಡಿ. ಇದ್ರಿಂದ ಬೇರೆ ಸಮಸ್ಯೆ ಶುರುವಾಗಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಮಕ್ಕಳಿಗೆ ಹಣ್ಣು ನೀಡುವ ಮುನ್ನ ನಿಮಗಿದು ತಿಳಿದಿರಲಿ
ಗುಜರಾತಿನ ಶ್ರೀ ಸ್ವಾಮಿನಾರಾಯಣ ಗುರುಕುಲ್ ವಿಶ್ವವಿದ್ಯಾ ಪ್ರತಿಷ್ಠಾನಕ್ಕೆ ಹೋಗುವ ಜನರು ವಾರದಲ್ಲಿ ಒಂದು ದಿನ ಸಗಣಿಯನ್ನು ದೇಹಕ್ಕೆ ಹಚ್ಚಿಕೊಳ್ತಿದ್ದಾರೆ. ಔಷಧಿ ಕಂಪನಿ ಸಹಾಯಕ ವ್ಯವಸ್ಥಾಪಕ ಗೌತಮ್ ಎಂಬುವವರಿಗೆ ಹಿಂದಿನ ವರ್ಷ ಕೊರೊನಾ ಆಗಿತ್ತಂತೆ. ಸಗಣಿ ಥೆರಪಿ ಅವರನ್ನು ಗುಣಮುಖರನ್ನಾಗಿ ಮಾಡಿತ್ತಂತೆ. ಇದೇ ಕಾರಣಕ್ಕೆ ಗೌತಮ್ ವಾರಕ್ಕೆ ಒಂದು ದಿನ ಥೆರಪಿ ಮಾಡಿಸಿಕೊಳ್ತಿದ್ದಾರೆ.
ಗೊಬ್ಬರ ಹಾಗೂ ಗೋಮೂತ್ರ ಸೇರಿಸಿ ಮೈಗೆ ಹಾಕಲಾಗುತ್ತದೆ. ಅದು ಒಣಗಿದ ನಂತ್ರ ಹಾಲು ಅಥವಾ ಮಜ್ಜಿಗೆಯಲ್ಲಿ ಮೈ ತೊಳೆಯಲಾಗುತ್ತದೆ. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ಇಲ್ಲಿನವರ ನಂಬಿಕೆ. ಆದ್ರೆ ಇದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ವೈದ್ಯರು ಹೇಳಿದ್ದಾರೆ. ಇದ್ರ ಬಗ್ಗೆ ಯಾವುದೇ ಸಂಶೋಧನೆಯಾಗಿಲ್ಲ. ಸಗಣಿ ಲೇಪನದಿಂದ ಪ್ರಾಣಿಗಳ ರೋಗ ಮನುಷ್ಯರಿಗೆ ಬರಬಹುದು. ಜೊತೆಗೆ ಒಂದೇ ಕಡೆ ಎಲ್ಲರೂ ಸೇರುವುದ್ರಿಂದ ವೈರಸ್ ಹರಡುವ ಅಪಾಯ ಹೆಚ್ಚೆಂದು ವೈದ್ಯರು ಹೇಳಿದ್ದಾರೆ.