ಕೋವಿಡ್ ಸಾಂಕ್ರಾಮಿಕ ಮನುಷ್ಯನ ಆತ್ಮಬಲವನ್ನೇ ಕುಗ್ಗಿಸುತ್ತಿದೆ. ಅಂಥದ್ದರಲ್ಲಿ ಕೊರೊನಾ ಗೆದ್ದವರ ನಗುಮೊಗದ ವಿಡಿಯೋ ಆಗಿಂದಾಗ್ಗೆ ವೈರಲ್ ಆಗುತ್ತಿದೆ.
ಇದೀಗ ಕೋವಿಡ್ ಚಿಕಿತ್ಸೆ ನಿರತ ಡಾಕ್ಟರ್ ಆಶಿಕೇತ್ ಎಂಬುವರು ಇನ್ ಸ್ಟಾ ಗ್ರಾಂನಲ್ಲಿ ಅಂತದ್ದೊಂದು ಗಮನ ಸೆಳೆಯುವ ವಿಡಿಯೋ ಹಂಚಿಕೊಂಡಿದ್ದಾರೆ.
ಆ ವಿಡಿಯೋವು ಕೊರೋನ ವೈರಸ್ ವಿರುದ್ಧ ಕಷ್ಟಪಟ್ಟು ಹೋರಾಡಿ ಅದನ್ನು ಸೋಲಿಸಿದ ಯೋಧರನ್ನು ತೋರಿಸಿದೆ. ತೀವ್ರವಾದ ರೋಗ ಲಕ್ಷಣ ಇದ್ದವರು ಚೇತರಿಸಿಕೊಂಡು ಹಿಂದೆಂದಿಗಿಂತ ಪುಟಿದೇಳುವ ಉತ್ಸಾಹ, ನಗು ವಿಡಿಯೋದಲ್ಲಿ ಕಾಣಿಸುತ್ತಿದೆ.
ರಾಜ್ಯದಲ್ಲಿ 35 ಸಾವಿರಕ್ಕೂ ಅಧಿಕ ಕೊರೊನಾ ಕೇಸ್: ಸಕ್ರಿಯ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆ
ಚೇತರಿಸಿಕೊಂಡ ರೋಗಿಗಳ ಮುಖದಲ್ಲಿ ದೊಡ್ಡ ನಗು ಹಾಗೂ ಅವರು ವಿಜಯದ ಚಿಹ್ನೆಯನ್ನು ತೋರಿಸುತ್ತಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.
ಈ ಕಠೋರ ವಾತಾವರಣದಲ್ಲಿ ಸ್ವಲ್ಪ ಸಕಾರಾತ್ಮಕತೆಯನ್ನು ತರುವ ಉದ್ದೇಶದಿಂದ ವೈದ್ಯರು ವಿಡಿಯೋವನ್ನು ಜಾಲತಾಣದಲ್ಲಿ ಆಕರ್ಷಕ ಮತ್ತು ಭರವಸೆ ತುಂಬುವ ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ.
https://www.instagram.com/p/COu5ppmJq4c/?utm_source=ig_web_copy_link