ಕೊರೊನಾ ಎರಡನೆ ಅಲೆಯು ಜನಸಾಮಾನ್ಯರನ್ನ ಸಾವಿನ ದವಡೆಯ ಬಳಿಗೆ ದೂಡುತ್ತಿದ್ದರೆ ಆರೋಗ್ಯ ಸಿಬ್ಬಂದಿ ವಿಶ್ರಾಂತಿಯೂ ಇಲ್ಲದೇ ಹಗಲಿರುಳು ದುಡಿಯುವಂತೆ ಮಾಡಿದೆ. ದಿನಂಪೂರ್ತಿ ಪಿಪಿಇ ಕಿಟ್ ಧರಿಸಿ ಚಿಕಿತ್ಸೆ ಮಾಡುವ ವೈದ್ಯರು ಹಾಗೂ ನರ್ಸ್ಗಳ ಸಾಕಷ್ಟು ಫೋಟೋ ಹಾಗೂ ವಿಡಿಯೋಗಳು ಭಾರೀ ವೈರಲ್ ಆಗ್ತಿದೆ.
ಅಹಮದಾಬಾದ್ನ ವೈದ್ಯ ಸೋಹಿಲ್ ಮಕ್ವಾನಾ ಟ್ವಿಟರ್ನಲ್ಲಿ ತಮ್ಮ ಫೋಟೋಗಳನ್ನ ಶೇರ್ ಮಾಡಿದ್ದಾರೆ. ಮೊದಲ ಫೋಟೋದಲ್ಲಿ ಪಿಪಿಇ ಕಿಟ್ ಧರಿಸಿದ ಫೋಟೋ ಹಾಗೂ ಇನ್ನೊಂದು ಫೋಟೋದಲ್ಲಿ ಪಿಪಿಇ ಕಿಟ್ ಹಾಕಿ ದಿನವಿಡೀ ರೋಗಿಗಳ ಸೇವೆ ಮಾಡಿದ ಬಳಿಕ ತಮ್ಮ ದೇಹ ಎಷ್ಟು ಬೆವರಿದೆ ಅನ್ನೋದನ್ನ ತೋರಿಸಿದ್ದಾರೆ.
ಈ ಫೋಟೋಗೆ ಸೋಹಿಲ್, ದೇಶಕ್ಕಾಗಿ ಸೇವೆ ಸಲ್ಲಿಸುತ್ತಿರೋದಕ್ಕೆ ಹೆಮ್ಮೆ ಆಗಿದೆ ಎಂದು ಶೀರ್ಷಿಕೆ ನೀಡಿದ್ದಾರೆ.
ಇನ್ನೊಂದು ಟ್ವೀಟ್ನಲ್ಲಿ ಸೋಹಿಲ್, ಎಲ್ಲಾ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿ ಪರವಾಗಿ ನಾನು ಮಾತನಾಡುತ್ತಿದ್ದೇನೆ. ನಮ್ಮ ಕುಟುಂಬದಿಂದ ದೂರವಿದ್ದು ನಾವು ಸಿಕ್ಕಾಪಟ್ಟೆ ಶ್ರಮವಹಿಸಿ ದುಡಿಯುತ್ತಿದ್ದೇವೆ. ಕೆಲವೊಮ್ಮೆ ಸೋಂಕಿತರಿಂದ ಒಂದು ಅಡಿ ದೂರ ಇನ್ನೂ ಕೆಲವು ಬಾರಿ ಕೇವಲ ಒಂದಿಂಚು ದೂರ. ದಯಮಾಡಿ ಲಸಿಕೆ ತೆಗೆದುಕೊಳ್ಳಲು ಹೋಗಿ. ಇದೊಂದೇ ಪರಿಹಾರ. ಸುರಕ್ಷಿತವಾಗಿರಿ. ನನ್ನನ್ನ ಕೊರೊನಾ ವಾರ್ಡ್ಗೆ ಪೋಸ್ಟ್ ಮಾಡಲಾಗಿದೆ. ದಿನ ಕಳೆಯೊದ್ರೊಳಗೆ ನನ್ನ ದೇಹ ಈ ರೀತಿ ಆಗಿದೆ ಎಂದು ಗುಜರಾತ್ನ ಧಾರ್ಪುರದ ಜಿಎಂಇಆರ್ಎಸ್ನ ವೈದ್ಯಕೀಯ ಕಾಲೇಜಿನ ವೈದ್ಯ ಸೋಹಿಲ್ ಹೇಳಿದ್ದಾರೆ.
ವರದಕ್ಷಿಣೆ ರೂಪದಲ್ಲಿ ಬಂದಿತ್ತಂತೆ ರೈಲು….! ಅದನ್ನು ನಿರಾಕರಿಸಿದ್ದರ ಹಿಂದಿದೆ ಈ ಕಾರಣ
ಇದು ಕೇವಲ ನನ್ನ ಪರಿಸ್ಥಿತಿ ಮಾತ್ರವಲ್ಲ. ಇದು ಎಲ್ಲಾ ಆರೋಗ್ಯ ಸಿಬ್ಬಂದಿಯ ಪರಿಸ್ಥಿತಿಯಾಗಿದೆ. ಪ್ರತಿಯೊಬ್ಬರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಫೋಟೋ ವೈರಲ್ ಆದ ಬಳಿಕ ಮಾತನಾಡಿದ ಸೋಹಿಲ್, ಇದು ಸಂಭ್ರಮವಲ್ಲ. ಆದರೆ ನಮ್ಮ ಪರಿಸ್ಥಿತಿ ಜನರನ್ನ ಮುಟ್ಟಿದೆ ಎಂದು ತಿಳಿದು ಖುಷಿಯಾಗಿದೆ. ನಾವು ಕುಟುಂಬದಿಂದ ದೂರಾಗಿ ಈ ಕೆಲಸಗಳನ್ನ ಮಾಡುತ್ತಿದ್ದೇವೆ. ನಮಗೆ ನಿಮ್ಮ ಸಹಯೋಗದ ಅವಶ್ಯಕತೆ ಎಂದು ಹೇಳಿದ್ದಾರೆ.