alex Certify ಆಮ್ಲಜನಕ ಕೊರತೆಯಿಂದ 6 ಮಂದಿ ರೋಗಿಗಳು ಸಾವು: ತಲೆಮರೆಸಿಕೊಂಡ ವೈದ್ಯರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಮ್ಲಜನಕ ಕೊರತೆಯಿಂದ 6 ಮಂದಿ ರೋಗಿಗಳು ಸಾವು: ತಲೆಮರೆಸಿಕೊಂಡ ವೈದ್ಯರು

ಗುರುಗಾಂವ್​ ಆಸ್ಪತ್ರೆಯಲ್ಲಿ ಆಕ್ಸಿಜನ್​​ ಕೊರತೆಯಿಂದ ರೋಗಿಗಳು ಸಾವಿಗೀಡಾಗಿದ್ದು, ಮೃತರ ಕುಟುಂಬಸ್ಥರು ವಾರ್ಡ್​ನ ಸುತ್ತ ಕಿರುಚುತ್ತಾ ವೈದ್ಯರ ವಿರುದ್ಧ ಆಕ್ರೋಶ ಹೊರಹಾಕುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಸ್ಪತ್ರೆಯಲ್ಲಿ ಆಕ್ಸಿಜನ್​ ಅಭಾವ ಉಂಟಾಗುತ್ತಿದ್ದಂತೆಯೇ ವೈದ್ಯರು ಅಲ್ಲಿಂದ ಎಸ್ಕೇಪ್​ ಆಗಿದ್ದರು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಗುರುಗಾಂವ್​​ನ ಕೃತಿ ಆಸ್ಪತ್ರೆಯಲ್ಲಿ ನಡೆದ ಘಟನೆ ಇದಾಗಿದ್ದು, ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ. ಕಳೆದ ಶುಕ್ರವಾರ ಈ ಆಸ್ಪತ್ರೆಯಲ್ಲಿ ಆಮ್ಲಜನಕ ಸಿಗದೇ 6 ರೋಗಿಗಳು ಸಾವನ್ನಪ್ಪಿದ್ದಾರೆ. ಇದೊಂದು ಹಳೆಯ ವಿಡಿಯೋವಾಗಿದ್ದು ಆಸ್ಪತ್ರೆಯ ಈಗಿನ ಪರಿಸ್ಥಿತಿಗೂ ಹಾಗೂ ಈ ವಿಡಿಯೋಗೂ ಸಂಬಂಧವಿಲ್ಲ ಎಂದು ಗುರುಗಾಂವ್​​ನ ಜಿಲ್ಲಾಡಳಿತ ಹೇಳಿದೆ.

40 ಮೆಟ್ರಿಕ್ ಟನ್ ಆಕ್ಸಿಜನ್ ಹೊತ್ತು ತಂದ ತಲ್ವಾರ್

ವಿಡಿಯೋದಲ್ಲಿ ಮೃತರ ಕುಟುಂಬಸ್ಥರು ನರ್ಸ್​ ಸ್ಟೇಷನ್​ಗೆ, ವಾರ್ಡ್​ ಹಾಗೂ ಕ್ಯಾಬಿನ್​ಗೆ ಓಡಾಡುತ್ತಿದ್ದಾರೆ. ಆದರೆ ಯಾರಿಗೂ ವೈದ್ಯರು ಕಾಣುತ್ತಿಲ್ಲ. ಇದರಿಂದ ಆಕ್ರೋಶಗೊಂಡ ಕುಟುಂಬಸ್ಥರು ಪೊಲೀಸರ ಬಳಿ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ.

ಇನ್ನು ಈ ಬಗ್ಗೆ ಆಸ್ಪತ್ರೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದ್ದು, ಈ ಘಟನೆ ನಡೆದ ವೇಳೆಯಲ್ಲಿ ವೈದ್ಯರು ಆಸ್ಪತ್ರೆಯಲ್ಲೇ ಇದ್ದರು. ಆದರೆ ಕುಟುಂಬಸ್ಥರು ಹಲ್ಲೆ ನಡೆಸಬಹುದು ಎಂಬ ಕಾರಣಕ್ಕೆ ಕ್ಯಾಂಟೀನ್​​ನಲ್ಲಿ ಅಡಗಿದ್ದರು ಎಂದು ಹೇಳಿದ್ದಾರೆ.

ಆಕ್ಸಿಜನ್​ ಅಭಾವದಿಂದ ಮೃತಪಟ್ಟ ರೋಗಿಗಳಲ್ಲಿ ಮೂವರು ಐಸಿಯು ಹಾಗೂ ಉಳಿದ ಮೂವರು ಸಾಮಾನ್ಯ ವಾರ್ಡ್​ನಲ್ಲಿದ್ದರು ಎನ್ನಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...