ನವರಾತ್ರಿ ಸಂಭ್ರಮದ ಮೊದಲ ದಿನದಿಂದಲೇ ದೇವಿಯ ದೇಗುಲಗಳಲ್ಲಿ ಭಕ್ತರ ಗಣವೇ ನೆರೆದಿದೆ. 9 ದಿನಗಳ ಕಾಲ ದೇವಿಯನ್ನ ವಿವಿಧ ರೂಪದಲ್ಲಿ ಆರಾಧಿಸಲಾಗುತ್ತೆ, ದೇವಿಯ ಈ ಒಂಬತ್ತು ರೂಪಗಳು ಮಹಿಳೆಯ ಶಕ್ತಿಯನ್ನ ಪ್ರತಿಬಿಂಬಿಸುತ್ತೆ.
ದೇಶದಲ್ಲಿ ಕರೊನಾ ವೈರಸ್ ಸಂಕಷ್ಟ ಉಲ್ಬಣವಾದಾಗಿನಿಂದಲೂ ವೈದ್ಯಲೋಕ ಜೀವದ ಹಂಗು ತೊರೆದು ಜನರ ಪ್ರಾಣ ರಕ್ಷಣೆ ಮಾಡಲು ಶ್ರಮಿಸುತ್ತಿವೆ . ಮಹಿಳಾ ವೈದ್ಯೆಯೊಬ್ಬರು ದುರ್ಗಾ ಮಾತೆಯ ಅವತಾರದಲ್ಲಿ ನಿಂತು ತೆಗೆಸಿರೋ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಫೋಟೋದಲ್ಲಿ ಮಹಿಳಾ ವೈದ್ಯೆ ದೇವಿಯ ರೂಪದಲ್ಲಿ ನಿಂತಿದ್ರೆ ಉಳಿದ ವೈದ್ಯರು ಆಕೆಯ ಆಯುಧದ ರೀತಿಯಲ್ಲಿ ನಿಂತಿದ್ದಾರೆ. ಎದುರಿಗೆ ರೋಗಿ ಮಲಗಿಕೊಂಡಿದ್ದಾರೆ , ಈ ಫೋಟೋ ವಾಟ್ಸಾಪ್, ಫೇಸ್ಬುಕ್, ಟ್ವಿಟರ್ಗಳಲ್ಲಿ ಶೇರ್ ಆಗ್ತಿದ್ದಂತೆ ಅನೇಕರು ಇದು ನಿಜವಾದ ದುರ್ಗಿಯ ರೂಪ ಅಂತಾ ಹೇಳಿದ್ದಾರೆ. ಇನ್ನೂ ಕೆಲವರು ಇಂತಹ ಕಠಿಣ ಸಂದರ್ಭದಲ್ಲಿ ಕಾರ್ಯನಿರ್ವಹಿಸ್ತಾ ಇರುವ ನಿಮಗೆ ದೇವರ ರಕ್ಷಣೆ ಸದಾ ಇರಲಿ ಅಂತಾ ಆರ್ಶೀವದಿಸಿದ್ದಾರೆ.